೨೦ ಲಕ್ಷ ರೂ. ಅನುದಾನ ಮಂಜೂರು

ಬೆನಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಲೆ ಸ್ವಚ್ಛತೆ ಕಾರ್ಯಕ್ರಮದಲ್ಲಿ ಲಕ್ಷ್ಮಿ ಖೋತ, ಸಿದ್ದು ನರಾಟೆ, ರಮೇಶ ಪಾಟೀಲ, ಪ್ರಕಾಶ ಶಿಂಧೆ, ಶಾಂತಾ ಕಿಲ್ಲೇದಾರ ಇತರರಿದ್ದರು
ಬೆನಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಲೆ ಸ್ವಚ್ಛತೆ ಕಾರ್ಯಕ್ರಮದಲ್ಲಿ ಲಕ್ಷ್ಮಿ ಖೋತ, ಸಿದ್ದು ನರಾಟೆ, ರಮೇಶ ಪಾಟೀಲ, ಪ್ರಕಾಶ ಶಿಂಧೆ, ಶಾಂತಾ ಕಿಲ್ಲೇದಾರ ಇತರರಿದ್ದರು
Published on
ನಿಪ್ಪಾಣಿ: ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನದ ಫಲವಾಗಿ ತಾಲೂಕಿನ ಬೆನಾಡಿ, ಹುನ್ನರಗಿ ಮತ್ತು ಕೂನ್ನೂರ ಗ್ರಾಮಗಳ ನಡುವಿನ ಹಳ್ಳ ಸ್ವಚ್ಛಗೊಳಿಸಲು ೨೦ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಾಲೂಕು ಬಿಜೆಪಿ ಗ್ರಾಮೀಣ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಖೋತ ಹೇಳಿದರು.
ಪಟ್ಟಣದ ಬೆನಾಡಿ ಗ್ರಾಮದಲ್ಲಿ ಈಚೆಗೆ ನಾಲೆ ಸ್ವಚ್ಛತೆಗೆ ಚಾಲನೆ ನೀಡಿ ಮಾತನಾಡಿ, ಹುನ್ನರಗಿ, ಬೆನಾಡಿಯ ಗಡಿಯಿಂದ ಕೂನ್ನೂರ ಗ್ರಾಮದ ಗಡಿಯವgಗೆ ಸುಮಾರು ೪ ಕಿ.ಮೀ. ಉದ್ದದ ನಾಲೆಯಲ್ಲಿ ಕಸ ತುಂಬಿ ರೈತರಿಗೆ ತೊಂದರೆಯಾಗುತ್ತಿತ್ತು. ಇದ್ದನ್ನು ಗಮನಿಸಿ ಶಾಸಕಿ ಶಶಿಕಲಾ ಜೊಲ್ಲೆ ನಾಲೆ ಸ್ವಚ್ಛತೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಅನುಕೂಲವಾಗಲಿದೆ ಎಂದರು.
ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಿದ್ದು ನರಾಟೆ, ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ರಮೇಶ ಪಾಟೀಲ, ಪ್ರಕಾಶ ಶಿಂಧೆ, ಬೇನಾಡಿ ಗ್ರಾಪಂ ಅಧ್ಯಕ್ಷ ಸತ್ಯಪ್ಪ ಹಜಾರೆ, ಬಬನ್ ಹವಾಲ್ದಾರ್, ವಿಜಯ ಪಾಟೀಲ, ವಿನೋದ ಮಗದುಮ್ಮ, ರಾವಸಾಹೇಬ ಜಾನವಾಡೆ, ಕಲ್ಲಪ್ಪಣ್ಣ ನಾಯಕ, ಚನ್ನಗೌಡ ಪಾಟೀಲ, ಸದಾಶಿವ ಜಾನವಾಡೆ, ಪ್ರಕಾಶ ದೇಸಾಯಿ, ಶಾಂತಾ ಕಿಲ್ಲೇದಾರ, ರಾಜು ಚಂಡೂರೆ, ಅಪ್ಪಾಸಾಹೇಬ ಸಂಗಾವೆ, ಮಹಾದೇವ ಬೋಟೆ, ಪೋಪಟ್ ಕಿಲ್ಲೇದಾರ, ರಾಜೇಂದ್ರ ಪಾಟೀಲ, ಸಂತೋಷ ಪೂಜಾರಿ, ಬಾಳು ಜಾಣಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net