12,99,74,572 ರೂ. ಬಜೆಟ್ ಮಂಡನೆ

ಬೋರಗಾಂವ ಪಪಂನ ಬಜೆಟ್ ಪುಸ್ತಕವನ್ನು ಪಪಂ ಅಧ್ಯಕ್ಷ ದಿಗಂಬರ್ ಕಾಂಬಳೆ, ಭಾರತಿ ವಾಸವಾಡೆ, ಪ್ರದೀಪ ಮಾಳಿ, ಎಸ್.ಬಿ.ತೊಡಕರ, ಶೋಭಾ ಹಾವಲೆ ಹಾಗೂ ಇತರರು ಪ್ರದರ್ಶಿಸಿದರು.
ಬೋರಗಾಂವ ಪಪಂನ ಬಜೆಟ್ ಪುಸ್ತಕವನ್ನು ಪಪಂ ಅಧ್ಯಕ್ಷ ದಿಗಂಬರ್ ಕಾಂಬಳೆ, ಭಾರತಿ ವಾಸವಾಡೆ, ಪ್ರದೀಪ ಮಾಳಿ, ಎಸ್.ಬಿ.ತೊಡಕರ, ಶೋಭಾ ಹಾವಲೆ ಹಾಗೂ ಇತರರು ಪ್ರದರ್ಶಿಸಿದರು.
Published on
ಬೋರಗಾಂವ: ಪಟ್ಟಣ ಪಂಚಾಯಿತಿ 2026-27ನೇ ಸಾಲಿನ 12,99,05, 920 ರೂ. ಬಜೆಟ್ ಹಾಗೂ ಬಾಕಿ ಇರುವ 68,652 ರೂ. ಬಜೆಟ್‌ನ್ನು ದಿಗಂಬರ ಕಾಂಬಳೆ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಡಿಸಲಾಯಿತು.
ರಸ್ತೆ, ಒಳಚರಂಡಿ, ನೈರ್ಮಲ್ಯ, ನೀರು ಸರಬರಾಜು, ಬೀದಿದೀಪ, ಉದ್ಯಾನ, ಘನತ್ಯಾಜ್ಯ ಸೇರಿದಂತೆ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ. ಜತೆಗೆ ಶೇ.5 ಮನೆ ಕರ ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಕಲ್ಯಾಣ ನಿಧಿಗಾಗಿ ಒಟ್ಟು 3,48,33,553 ರೂ. ಹಾಗೂ 15ನೇ ಹಣಕಾಸು ಆಯೋಗದಿಂದ 8,36,36,000 ರೂ., ಎಸ್‌ಎಫ್‌ಸಿ ಅನುದಾನ, ವಾಟರ್ ಸ್ಕಾರ್‌ಸಿಟಿ, ಎಸ್‌ಎಸ್‌ಸಿ ಮತ್ತು ಇತರ ಅನುದಾನ ಮತ್ತು ವಿಶೇಷ ರಸೀದಿಗಳಿಂದ ವಿವಿಧ ಯೋಜನೆಗಳಿಗೆ 1,14,36,367 ಕೋಟಿ ರೂ. ಸೇರಿದಂತೆ ಒಟ್ಟು 12,99,05,920 ರೂಪಾಯಿ ಸೇರಿದೆ.
ಆದಾಯ, ಸರ್ಕಾರದ ವೇತನ, ಎಸ್‌ಎಸ್‌ಸಿ ಉಚಿತ ನಿಧಿ, ವಾಣಿಜ್ಯ ಆವರಣದ ಬಾಡಿಗೆ, ಕಟ್ಟಡ ನಿರ್ಮಾಣ ಅನುಮತಿ, ವ್ಯಾಪಾರ ಅನುಮತಿ ಶುಲ್ಕ, ಟೆಂಡರ್ ಮಾರಾಟ ಮತ್ತು ಸ್ಕ್ರಾೃಪ್ ಮಾರಾಟ, ರಾಜಸ್ವ ಆದಾಯ ಒಟ್ಟು 3,80,14,769 ರೂ., ಬಂಡವಾಳ ಆದಾಯ 8,05,80,000 ರೂ. ವಿಶೇಷ ವಸೂಲಾತಿ 1,14,36,367 ರೂ. ಒಟ್ಟು 12,99,74,572 ರೂಪಾಯಿ ಬಜೆಟ್ ಮಂಡಿಸಲಾಯಿತು. ಒಟ್ಟು ಉಳಿತಾಯ 68,652 ರೂ. ಎಂದು ಘೋಷಿಸಲಾಗಿದೆ ಎಂದು ಮುಖ್ಯಾಧಿಕಾರಿ ಎಸ್.ಬಿ.ತೋಡಕರ ಹೇಳಿದರು.
ಉಪಾಧ್ಯಕ್ಷೆ ಭಾರತಿ ವಾಸವಾಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಸದಸ್ಯ ಶರದ ಜಂಗಟೆ, ತುಳಸಿದಾಸ ವಾಸವಾಡೆ, ಮಾಣಿಕ ಕುಂಬಾರ, ರೋಹಿತ್ ಪಾಟೀಲ, ಶೋಭಾ ಹಾವಲೆ, ಪ್ರಥಮ ದರ್ಜೆ ಸಹಾಯಕ ರಾಹುಲ ಗುಡಯಿನಕರ್‌ಕರ, ದ್ವಿತೀಯ ದರ್ಜೆ ಸಹಾಯಕ ಪೋಪಟ್ ಕುರಳೆ, ಕಂದಾಯ ನಿರೀಕ್ಷಕ ಸಂದೀಪ ವಾಯಿಂಗಡೆ, ಗಜಾಲ್ ಜಮಾಲ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net