ರಸ್ತೆ ನಿರ್ಮಾಣ ಅಭಿವೃದ್ಧಿಗೆ ಪೂರಕ

ಮಮದಾಪುರ ಗ್ರಾಮದಲ್ಲಿನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಮರನಾಥ ಜಾಹಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಶಂಕರಗೌಡ ಪಾಟೀಲ, ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ ಇತರರಿದ್ದರು.
ಮಮದಾಪುರ ಗ್ರಾಮದಲ್ಲಿನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಮರನಾಥ ಜಾಹಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಶಂಕರಗೌಡ ಪಾಟೀಲ, ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ ಇತರರಿದ್ದರು.
Published on
ಗ್ರಾಮದಲ್ಲಿ ಸಿಎಂಐಡಿಪಿ ಅನುದಾನದಲ್ಲಿ ಅಂದಾಜು 2.80 ಕೋಟಿ ರೂ. ಮೊತ್ತದಲ್ಲಿ ಬಸವೇಶ್ವರ ವೃತ್ತದಿಂದ ಜಕಾತಿ ಕಟ್ಟೆವರೆಗೆ, ಮಮದಾಪುರ ಕ್ರಾಸ್‌ದಿಂದ ಪಾಂಡುರಂಗ ಮಂದಿರದವರೆಗೆ ಹಾಗೂ ಸಮೀಪದ ಮರಡಿ ಶಿವಾಪುರ ಗ್ರಾಮದಲ್ಲಿನ ಶಾಲಾ ಸಿಸಿ ರಸ್ತೆ ದುಂಡಾನಟ್ಟಿ ಗ್ರಾಮದಿಂದ ಹಣಮಾಪುರ ಕ್ರಾಸ್‌ವರಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಬಳಿಕ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಮಮದಾಪುರ ಕ್ರಾಸ್ ವಿಸ್ತರಣೆ ಕಾಮಗಾರಿ ವೀಕ್ಷಿಸಿದರು.
ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಶಂಕರಗೌಡ ಪಾಟೀಲ, ಈರಣ್ಣ ಜನ್ಮಟ್ಟಿ, ಕೆಂಚಪ್ಪ ಭಜಂತ್ರಿ, ಮಹಾದೇವ ಹಕ್ಕಿ, ಸುರೇಶ ಸನದಿ,
ಕೆಂಪಣ್ಣ ಮೈಲನ್ನವರ, ವೀರಭದ್ರ ಮೈಲನ್ನವರ, ಸಿದ್ದಪ್ಪ ಕಳ್ಯಾಗೋಳ, ಅಶೋಕ ಗೋಪಾಳಿ, ಶಿವಪ್ಪ ದಳವಾಯಿ, ಬಸಪ್ಪ ತಪಸಿ, ಮಲ್ಲಪ್ಪ ಕಡಕಬಾವಿ, ಮಲ್ಲಪ್ಪ ಶೀಗಿಹಳ್ಳಿ, ಮಲ್ಲು ಕೊತ್ತಲ, ನಿಂಗರಾಯ ಪೂಜೇರಿ, ಉಳವೇಶ ದುಂಡಾನಟ್ಟಿ, ಯಲ್ಲಪ್ಪ ಗೋವಿಂದಪ್ಪಗೋಳ, ಉದಯ ವಡ್ಡರಗಾವಿ, ಬಾಳೇಶ ದುಂಡಾನಟ್ಟಿ, ಭೀಮಶಿ ತೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net