ಗಣರಾಜ್ಯೋತ್ಸವ: ಪೂರ್ವಭಾವಿ ಸಭೆ

ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಡಿಸಿ ಮೊಹಮ್ಮದ್‌ರೋಷನ್ ಮಾತನಾಡಿದರು. ಕೆ.ರಾಮರಾಜನ್, ಆರ್.ಬಿ.ಬಸರಗಿ, ಡಾ.ಭಾನುಪ್ರಕಾಶ ಇತರರಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಡಿಸಿ ಮೊಹಮ್ಮದ್‌ರೋಷನ್ ಮಾತನಾಡಿದರು. ಕೆ.ರಾಮರಾಜನ್, ಆರ್.ಬಿ.ಬಸರಗಿ, ಡಾ.ಭಾನುಪ್ರಕಾಶ ಇತರರಿದ್ದಾರೆ.
Published on
ಬೆಳಗಾವಿ: ಗಣರಾಜ್ಯೋತ್ಸವಂದು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶಿಷ್ಟಾಚಾರದನ್ವಯ ತಪ್ಪದೇ ಧ್ವಜಾರೋಹಣ ನೆರವೇರಿಸುವಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರ್ಥಪೂರ್ಣ ಆಚರಣೆಗೆ ರಚಿಸಲಾಗಿರುವ ಸಮಿತಿಗಳವರನ್ನು ಅಗತ್ಯ ತಯಾರಿಗಳನ್ನು ಪರಸ್ವರ ಸಮನ್ವಯದೊಂದಿಗೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಜ.26ರಂದು ಬೆಳಗ್ಗೆ 9ರೊಳಗೆ ಎಲ್ಲ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಜಿಲ್ಲಾ ಕ್ರೀಡಾಂಗಣದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ನಗರದ ಎಲ್ಲ ಶಾಲಾ-ಕಾಲೇಜ್, ವಸತಿ ನಿಲಯದ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಸಂಬಂಧಿತ ಅಧಿಕಾರಿಗಳು ತಪ್ಪದೇ ನಿಗಾ ವಹಿಸಬೇಕು. ಪ್ರಮುಖ ವೃತ್ತಗಳನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಕಾರ್ತಿಕ ಎಂ., ಎಎಸ್ಪಿ ಆರ್.ಬಿ.ಬಸರಗಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಡಾ. ಭಾನುಪ್ರಕಾಶ ಜೆ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೆಶಕ ಮಲ್ಲಿಕಾರ್ಜುನ ನಾಯಕ, ಕ್ರೀಡಾ ಇಲಾಖೆ ಉಪನಿರ್ದೆಶಕ ಬಿ.ಶ್ರೀನಿವಾಸ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ, ಮಲ್ಲೇಶ ಚೌಗಲಾ, ಇತರರಿದ್ದರು.
--
--
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net