ಚಿಕ್ಕೋಡಿಯಲ್ಲಿ ತಂಪೆರೆದ ಮಳೆ

ಚಿಕ್ಕೋಡಿಯಲ್ಲಿ ತಂಪೆರೆದ ಮಳೆ
ಚಿಕ್ಕೋಡಿಯಲ್ಲಿ ತಂಪೆರೆದ ಮಳೆ
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕೋಡಿಯಲ್ಲಿ ತಂಪೆರೆದ ಮಳೆ
  • ರೈತರ ಮೊಗದಲ್ಲಿ ಮಂದಹಾಸ ತಂದ ವರುಣ
  • ಜಿಲ್ಲೆಯ ಹಲವೆಡೆ ಮಳೆ ಸಿಂಚನ

ಚಿಕ್ಕೋಡಿಯಲ್ಲಿ ತಂಪೆರೆದ ಮಳೆರಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಕಳೆದ ಎರಡು ತಿಂಗಳಿನಿಂದ ಬಿಸಿಲಿನ ತಾಪಮಾನದಿಂದ ಬಸವಳಿದ ಜನತೆಗೆ ಸೋಮವಾರ ಸುರಿದ ಅಕಾಲಿಕ ಮಳೆ ತಂಪು ಸೂಸಿದೆ.
ಪಟ್ಟಣ ಸೇರಿದಂತೆ ಚಿಕ್ಕೋಡಿ ಉಪ ವಿಭಾಗದ ಕೆಲವು ಕಡೆಗಳಲ್ಲಿ ಮಳೆರಾಯನ ಆಗಮನದಿಂದ ಮಳೆಯಾಶ್ರಿತ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಿಲ್ಲೆಯ ಚಿಕ್ಕೋಡಿ, ಹುಕ್ಕೇರಿ , ನಿಪ್ಪಾಣಿ, ರಾಯಬಾಗ ತಾಲೂಕಿನ ಕೆಲವು ಸ್ಥಳಗಳಲ್ಲಿ ಒಂದು ಗಂಟೆಗೂ ಅಧಿಕ ಸಮಯ ಮಳೆಯಾಗಿದೆ.ಪರಿಣಾಮ ರಸ್ತೆಯ ಧೂಳಿನಿಂದ ಕಂಗೆಟ್ಟಿದ ಜನರಿಗೆ ವರುಣನ ಕೃಪೆಯಿಂದ ಧೂಳು ತಣಿಸಿದೆ. ಆದರೆ ಕೊಯ್ಲಿಗೆ ಬಂದಿದ್ದ ಹಿಂಗಾರು ಬೆಳೆಗಳಾದ ಮೆಕ್ಕೆ ಜೋಳ, ಗೋಧಿ, ತುಂಬಾ ಬೆಳೆಗಾರರಿಗೆ ಬೆಳೆ ಹಾನಿಯ ಆತಂಕ ಉಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net