ಭಿನ್ನಮತ ಬದಿಗಿಟ್ಟು ಪಕ್ಷದ ಪ್ರಗತಿಗೆ ಶ್ರಮಿಸಿ

ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಯುವ ಜನತಾದಳ (ಜಾತ್ಯತೀತ) ಸಮಾವೇಶವನ್ನು ಕೃಷ್ಣ ರೆಡ್ಡಿ ಉದ್ಘಾಟಿಸಿದರು. ವೀರಭದ್ರಪ್ಪ ಹಾಲರವಿ, ಶಂಕರ ಮಾಡಲಗಿ, ಸೌರಭ ಚೋಪ್ರಾ, ವಿಠ್ಠಲ ಗಡ್ಡಿ, ಪಂಚನಗೌಡ ದ್ಯಾಮನಗೌಡರ ಇತರರಿದ್ದರು.
ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಯುವ ಜನತಾದಳ (ಜಾತ್ಯತೀತ) ಸಮಾವೇಶವನ್ನು ಕೃಷ್ಣ ರೆಡ್ಡಿ ಉದ್ಘಾಟಿಸಿದರು. ವೀರಭದ್ರಪ್ಪ ಹಾಲರವಿ, ಶಂಕರ ಮಾಡಲಗಿ, ಸೌರಭ ಚೋಪ್ರಾ, ವಿಠ್ಠಲ ಗಡ್ಡಿ, ಪಂಚನಗೌಡ ದ್ಯಾಮನಗೌಡರ ಇತರರಿದ್ದರು.
Published on
ಬೆಳಗಾವಿ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. 2028ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣ ರೆಡ್ಡಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಜನತಾದಳ (ಜಾತ್ಯತೀತ) ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕೈ ಬಲಪಡಿಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ಜೆಡಿಎಸ್ ಅಧಿಕಾರದಲ್ಲಿದ್ದಾಗ ಹಲವು ಜನಪರ ಯೋಜನೆ ನೀಡಿದೆ. ಆದರೆ, ಇಂದು ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ಕಾಂಗ್ರೆಸ್ ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಅಲ್ಕೋಡ ಹನುಮಂತ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರಿಂದ ಹಣ ಲೂಟಿ ಮಾಡುತ್ತಿದೆ. ಶೇ.58ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದರು. ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಜೆಡಿಎಸ್ ಪಕ್ಷವನ್ನು ಬೇರುಮಟ್ಟದಿಂದ ಬೆಳೆಸಲು ಜಿಲ್ಲೆಯ ಎಲ್ಲ ನಾಯಕರು ಶ್ರಮಿಸಬೇಕಿದೆ ಎಂದರು. ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಾಜಿ ಶಾಸಕ ವೀರಭ್ರದ್ರಪ್ಪ ಹಾಲಹರವಿ, ಸೌರಭ ಚೋಪ್ರಾ, ಮುಖಂಡರಾದ ವಿಠ್ಠಲ ಗಡ್ಡಿ, ಪಂಚನಗೌಡ ದ್ಯಾಮನಗೌಡರ, ಪ್ರಕಾಶ ಸೋನವಾಲ್ಕರ್, ಅಶೋಕ ಪಾಟೀಲ, ಕಾಡಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net