ಶರ್ಯತ್ತುಗಳ ವಿವರ: ಜೋಡು ಎತ್ತಿನ ಗಾಡಿ ಶರ್ಯತ್ತಿನಲ್ಲಿ ಶಂಕರ ಪೂಜೇರಿ (ಅಲಖನೂರ) ಪ್ರಥಮ, ಪ್ರತಾಪ ಕರಿಗಾರ (ಅಲಖನೂರ) ದ್ವಿತೀಯ ಮತ್ತು ರಮೇಶ ಕುಂಬಾರ (ರಾಯಬಾಗ) ತೃತೀಯ, ಕುದುರೆ ಶರ್ಯತ್ತಿನಲ್ಲಿ ಅಕ್ಷಯ (ರಾಯಬಾಗ) ಪ್ರಥಮ, ಅಪ್ರೋಜ್ ಸುಂದರಿ (ನಾಗರಮುನ್ನೋಳಿ) ದ್ವಿತೀಯ, ಮಹಾದೇವ ಈಟೇಕರಿ (ಭಿರಡಿ) ತೃತೀಯ, ಸೈಕಲ್ ಶರ್ಯತ್ತಿನಲ್ಲಿ ಹನುಮಾನ ಚೋಪಡೆ (ಸಾಂಗಲಿ) ಪ್ರಥಮ, ಬಾಳು ಹಿರೇಮಠ (ಇಂಚಲಕರAಜಿ) ದ್ವಿತೀಯ ಮತ್ತು ಬಸು ಧರ್ಮಟ್ಟಿ (ಧರ್ಮಟ್ಟಿ) ತೃತೀಯ ಬಹುಮಾನ ಪಡೆದರು. ಆರ್.ಎಚ್.ಗೊಂಡೆ, ಅಪ್ಪಾಸಾಹೇಬ ಕೆಂಗನ್ನವರ, ಗುಣಪಾಲ ಬಡೋರೆ, ಮಹಾವೀರ ಶೆಟ್ಟಿ, ರಮೇಶ ಕುಂಬಾರ, ಸಂಜು ಬಾವಚೆ, ಸಂತೋಷ ಶೆಟ್ಟಿ, ಹಾಲಪ್ಪ ಅಳಗವಾಡಿ, ತಾನಾಜಿ ದೀಪಾಳೆ, ಪ್ರಭಾಕರ ಗೆನ್ನಾನಿ, ಬೀರಪ್ಪ ಗೆನ್ನಾನಿ, ಶ್ರೀಪತಿ ದೇಸಾಯಿ, ಜಿ.ಎಸ್.ಕಲಾಲ ಇತರರಿದ್ದರು.