ನೇಜ ಗ್ರಾಮದಲ್ಲಿ ಕಾಡಸಿದ್ಧೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಪ್ರಮೋದ ಡೋಗರೆ ಪ್ರಥಮ, ಸಚಿನ ಖೋತ ದ್ವಿತೀಯ, ದಯಾನಂದ ಕಲ್ಲೇದಾರ ತೃತೀಯ ಬಹುಮಾನ ಪಡೆದರು. ಕುದುರೆ ಗಾಡಿ ಶರ್ಯತ್ತಿನಲ್ಲಿ ಲಗಮಣ್ಣ ಪ್ರಥಮ, ಸಾಗರ ಗೌಂಡಿ ದ್ವಿತೀಯ, ದತ್ತಾ ಮಾಳಿ ತೃತೀಯ ಸ್ಥಾನ ಪಡೆದರು. ಒಂದು ಕುದುರೆ ಎತ್ತಿನ ಗಾಡಿ ಶರ್ಯತ್ತಿನಲ್ಲಿ ಸೋಹಲ ಸಾಂಗಾವ ಪ್ರಥಮ, ಪೋಪಟ ದತವಾಡೆ ದ್ವಿತೀಯ, ಬಾಹುಬಲಿ ಚೌಗುಲೆ ದತವಾಡ ತೃತೀಯ ಸ್ಥಾನ ಪಡೆದರು.