ಅಥಣಿ ಗ್ರಾಮೀಣ: ಗ್ರಾಪಂ ಸದಸ್ಯರೆಲ್ಲ ಐದು ವರ್ಷದ ಅವಧಿಯಲ್ಲಿ ಪಕ್ಷಾತೀತವಾಗಿ ಎಲ್ಲರು ಒಂದಾಗಿ ಗ್ರಾಮಗಳ ಅಭಿವೃದ್ಧಿಗಾಗಿ ಒಳ್ಳೆಯ ಕಾರ್ಯ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಶ್ಯಾಮರಾವ್ ಪೂಜಾರಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಗ್ರಾಪಂ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸದಸ್ಯರ ಕಿತ್ತಾಟವಿಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರದಿಂದ ಗ್ರಾಪಂಗೆ ದೊರೆಯುವ ಎಲ್ಲ ಅನುದಾನ ತರುವುದರ ಜತೆಗೆ ನರೇಗಾ ಯೋಜನೆಯಡಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿ ಕೊಕಟನೂರ, ಯಲ್ಲಮ್ಮವಾಡಿಯಲ್ಲಿ ಗ್ರಾಮಾಭಿವೃದ್ಧಿಗೆ ಶ್ರಮಿಸಿರುವುದು ಶ್ಲಾಘನೀಯ ಎಂದರು.
ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿದರು. ಬಳಿಕ ಸನ್ಮಾನ ಕಾರ್ಯಕ್ರಮ ಜರುಗಿತು. ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ, ಉಪಾಧ್ಯಕ್ಷ
ಅರ್ಜುನ ಪೂಜಾರಿ, ಸದಸ್ಯರಾದ ಬಾಳಾಸಾಹೇಬ ಪೂಜಾರಿ, ಅನಿಲ ಮುಳಿಕ, ಮಲ್ಲಿಕಾರ್ಜುನ ಪರಾಂಡೆ, ಮಹಾದೇವ ಡಂಗಿ, ಭಾರತಿ ಚವ್ಹಾಣ, ಪ್ರಶಾಂತ ಕಾಂಬಳೆ, ಸತೀಶ ದೊಡಮನಿ, ಮಹಾವೀರ ಹಳಕಿ, ಪಿಡಿಒ ಸಿದ್ದಪ್ಪ ತುಂಗಳ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ದಾನಮ್ಮ ಬಾಗಿ, ಹನುಮಂತ ಮಾದರ ಇತರರಿದ್ದರು.