ಕಾರ್ಮಿಕರ ಆರೋಗ್ಯ ರಕ್ಷಣೆಗೆ ಆದ್ಯತೆ

ಅಥಣಿ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಡಾ.ದೀಪಾ ಪಾಂಗಿ, ಡಾ.ವರ್ಷಾ ಬಾಗಿ, ಡಾ.ಸ್ನೇಹಾ, ಎಸ್.ವಿ.ಯೋಗಿಮಠ ಇತರರಿದ್ದರು.
ಅಥಣಿ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಡಾ.ದೀಪಾ ಪಾಂಗಿ, ಡಾ.ವರ್ಷಾ ಬಾಗಿ, ಡಾ.ಸ್ನೇಹಾ, ಎಸ್.ವಿ.ಯೋಗಿಮಠ ಇತರರಿದ್ದರು.
Published on
ಅಥಣಿ: ಕಾರ್ಮಿಕರು ಮತ್ತು ಸಿಬ್ಬಂದಿ ಆರೋಗ್ಯದ ಕಾಳಜಿವಹಿಸುವುದು ಕಾರ್ಖಾನೆ ಉದ್ದೇಶವಾಗಿದೆ ಎಂದು ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.
ಸ್ಥಳೀಯ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಅನ್ನಪೂರ್ಣಾ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಆರೋಗ್ಯ ವಿಷಯದಲ್ಲಿ ನಿರ್ಲಕ್ಷ ವಹಿಸಬಾರದು. ಎಲ್ಲರೂ ಶಿಬಿರದ ಸದುಪಯೋಗ ಪಡೆದು ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದರು.
ಅನ್ನಪೂರ್ಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಡಾ.ದೀಪಾ ಪಾಂಗಿ ಮಾತನಾಡಿ, ಎಲ್ಲರೂ ಉತ್ತಮ ಆರೋಗ್ಯ ಹೊಂದಬೇಕು. ಆರೋಗ್ಯವಂತ ದೇಹ ಮತ್ತು ಸುರಕ್ಷಿತ ಪರಿಸರ ಇಲ್ಲದೆ ಕಾರ್ಯ ನಿರ್ವಹಣೆ ಅಸಾಧ್ಯ. ಎಲ್ಲರೂ ಉತ್ತಮ ಜೀವನಶೈಲಿ, ಆಹಾರ ಸೇವನೆ ರೂಢಿಸಿಕೊಳ್ಳಬೇಕು ಎಂದರು.
ಡಾ.ವರ್ಷಾ ಬಾಗಿ, ಡಾ.ಸ್ನೇಹಾ ಆರೋಗ್ಯ ಕುರಿತು ಸಲಹೆ ನೀಡಿದರು. ೩೫೦ಕ್ಕೂ ಅಽಕ ಕಾರ್ಮಿಕರು ಶಿಬಿರದ ಲಾಭ ಪಡೆದರು.
ಕಾರ್ಖಾನೆ ಅಧಿಕ್ಷಕ ಸುರೇಶ ಠಕ್ಕಣ್ಣವರ, ಲೆಕ್ಕಾಽಕಾರಿ ಶಂಕರ ಗೊಟಖಿಂಡಿ, ವಿನಾಯಕ ಮನಗೂಳಿ, ವಿಜಯ ಪಟ್ಟಣಶೆಟ್ಟಿ, ರಾಜು ಪತ್ತಾರ, ಎಸ್.ವಿ.ಯೋಗಿಮಠ, ಸಂಪತ್ತ ಯಲ್ಲಟ್ಟಿ ಹಾಗೂ ಕಾರ್ಖಾನೆ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net