ಮೊದಲ ಬಾರಿಗೆ ಮಹಿಳೆಯರಿಗೆ ಮೀಸಲಾಗಿದ್ದ ಖಜಾಂಚಿ ಸ್ಥಾನಕ್ಕೆ ಸವಿತಾ ಸಂಗೋಟೆ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎ.ಬಿ.ಮಂಗಸೂಳೆ, ಸಹಾಯಕರಾಗಿ ಆರ್.ಎಚ್.ಗೊಂಡೆ, ಎನ್.ಎಸ್.ಒಡೆಯರ, ಸಾರಿಕಾ ಕಾಂಬಳೆ ಕಾರ್ಯನಿರ್ವಹಿಸಿದರು. ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ, ಸತ್ಕರಿಸಲಾಯಿತು. ವಕೀಲರಾದ ವಿ.ಎಸ್.ಪೂಜಾರಿ, ಮಹೇಶ ಹೊಸಮನಿ, ಎಸ್.ಎಂ.ಸಲಗರೆ, ಎಸ್.ವಿ.ಪೂಜಾರಿ, ಯುವ ಉಮರಾಣಿ, ಬಿ.ಕೆ.ಶಿಂಗಾಡೆ, ಎಸ್.ಬಿ.ಬಿರಾದಾರಪಾಟೀಲ, ಎಸ್.ಬಿ.ಶ್ರೀಗೊಂಡ, ವಿನೋದ ಪೂಜೇರಿ, ಶ್ರೀದೇವಿ ನಾಯಿಕ, ಪದ್ಮಜಾ ಮಗದುಮ್ಮ, ವಿ.ಎಂ.ಗಲಗಲಿ, ಆರ್.ಎಸ್.ಕಳ್ಳಿಗುದ್ದಿ ಇತರರಿದ್ದರು.