ಪ್ರಗತಿ ಪಥದತ್ತ ವಿಶ್ವಕರ್ಮ ಸಹಕಾರ ಸಂಘ

ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ 25ನೇ ವಾರ್ಷಿಕ ಮಹಾಸಭೆ ಹಾಗೂ ರಜತ ಮಹೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ನಿಜಲಿಂಗೇಶ್ವರ ಸ್ವಾಮೀಜಿ, ವೀರೇಂದ್ರ ಸ್ವಾಮೀಜಿ, ಅರುಣ ಸಾಲಳ್ಳಿ, ವಿನಾಯಕ ಚಿಪ್ಪಲಕಟ್ಟಿ, ಸತೀಶ ಚಿಪ್ಪಲಕಟ್ಟಿ ಇತರರಿದ್ದರು.
ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ 25ನೇ ವಾರ್ಷಿಕ ಮಹಾಸಭೆ ಹಾಗೂ ರಜತ ಮಹೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ನಿಜಲಿಂಗೇಶ್ವರ ಸ್ವಾಮೀಜಿ, ವೀರೇಂದ್ರ ಸ್ವಾಮೀಜಿ, ಅರುಣ ಸಾಲಳ್ಳಿ, ವಿನಾಯಕ ಚಿಪ್ಪಲಕಟ್ಟಿ, ಸತೀಶ ಚಿಪ್ಪಲಕಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಥಾಪಕ ಅಧ್ಯಕ್ಷ ಅರುಣ ಸಾಲಳ್ಳಿ ಹೇಳಿಕೆ
  • 25ನೇ ವಾರ್ಷಿಕ ಮಹಾಸಭೆ
ಗೋಕಾಕ:

ಇಂದಿನ ಪೈಪೋಟಿ ಯುಗದಲ್ಲಿ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ 25 ವರ್ಷ ಪೂರೈಸಿ ಸಾಧನೆಯ ಮೈಲಿಗಲ್ಲು ನಿರ್ಮಿಸುವಲ್ಲಿ ಸದಸ್ಯರ ಸಹಕಾರ ಬಹುಮುಖ್ಯವಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ, ನಿರ್ದೆಶಕ ಅರುಣ ಸಾಲಳ್ಳಿ ಹೇಳಿದರು.

ನಗರದ ಮಹಾಲಕ್ಷ್ಮೀ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ 25ನೇ ವಾರ್ಷಿಕ ಮಹಾಸಭೆ ಹಾಗೂ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಂಘ ಹಣಕಾಸಿನ ಪ್ರಗತಿಯೊಂದಿಗೆ ಮೌಲ್ಯಾಧಾರಿತ ಸೇವೆ ಒದಗಿಸುವ ಮೂಲಕ ಸಹಕಾರ ರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ ಎಂದರು.
ಇಂದಿನ ಡಿಜಿಟಲ್ ಯುಗದಲ್ಲಿ ಸಹಕಾರ ರಂಗ ತನ್ನ ಆಸ್ತಿತ್ವ ಉಳಿಸಿಕೊಂಡು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವುದು ಗಮನಾರ್ಹವಾಗಿದೆ. ಆಡಳಿತ ಮಂಡಳಿ ಕಾರ್ಯ ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ಸೇವೆ ಲವಾಗಿ ಸಂಘ ಪ್ರಗತಿ ಪಥದತ್ತ ಸಾಗಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ವಿನಾಯಕ ಚಿಪ್ಪಲಕಟ್ಟಿ ಮಾತನಾಡಿ, ಪ್ರಸಕ್ತ ಸಾಲಿನ 43.94 ಕೋಟಿ ರೂ. ದುಡಿಯುವ ಬಂಡವಾಳದಲ್ಲಿ 1.10 ಕೋಟಿ ರೂ. ಲಾಭಗಳಿಸಿ ಪ್ರಗತಿ ಸಾಧಿಸುತ್ತಿದೆ. ಈಗಗಾಲೇ ಘಟಪ್ರಭಾದಲ್ಲಿ ಒಂದು ಶಾಖೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಶಾಖೆ ಆರಂಭಿಸುವ ಯೋಜನೆ ಹೊಂದಿದೆ ಎಂದು ತಿಳಿಸಿದರು.
ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ, ನವಲಗುಂದ ಅಜಾತ ನಾಗಲಿಂಗ ಮಠದ ವೀರೇಂದ್ರ ಸ್ವಾಮೀಜಿ, ಲೆಕ್ಕಪರಿಶೋಧಕ ಸತೀಶ ಚಿಪ್ಪಲಕಟ್ಟಿ, ಸಂಘದ ಉಪಾಧ್ಯಕ್ಷ ವಿನೋದ ಡೋಂಗರೆ, ಸುರೇಶ ಪತ್ತಾರ, ಜಿ.ಆರ್.ನಿಡೋಣಿ, ಶ್ರೀಕಾಂತ ಮೋಹರೆ, ಶ್ರೀಕಾಂತ ಪತ್ತಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net