ಪ್ರವಚನದಿಂದ ಮನುಷ್ಯನಿಗೆ ಶಾಂತಿ

ಚಿಕ್ಕೋಡಿ ತಾಲೂಕಿನ ಯದ್ಯಾನವಾಡಿ ಗ್ರಾಮದ ಸಿದ್ಧಾರೂಢಮಠದ ಸಮುದಾಯ ಭವನದಲ್ಲಿ ಸಂಪಾದನಾ ಸ್ವಾಮೀಜಿ ಪ್ರವಚನ ನೀಡಿದರು. ಎಸ್.ಎ.ಪಾಟೀಲ, ಅಲಿಸಾಬ್ ಬಹುರೂಪಿ, ಕಾಳಪ್ಪ ಬಡಿಗೇರ ಇದ್ದರು.
ಚಿಕ್ಕೋಡಿ ತಾಲೂಕಿನ ಯದ್ಯಾನವಾಡಿ ಗ್ರಾಮದ ಸಿದ್ಧಾರೂಢಮಠದ ಸಮುದಾಯ ಭವನದಲ್ಲಿ ಸಂಪಾದನಾ ಸ್ವಾಮೀಜಿ ಪ್ರವಚನ ನೀಡಿದರು. ಎಸ್.ಎ.ಪಾಟೀಲ, ಅಲಿಸಾಬ್ ಬಹುರೂಪಿ, ಕಾಳಪ್ಪ ಬಡಿಗೇರ ಇದ್ದರು.
Published on
ಚಿಕ್ಕೋಡಿ: ವಿಶ್ವಗುರು ಬಸವಣ್ಣ ಸಮಾಜದ ಅಂಧಕಾರವನ್ನು ಕಳೆಯಲು ಧರೆಗೆ ಬಂದವರು ಎಂಬ ಕುವೆಂಪು ಮಾತು ನಿಜಕ್ಕೂ ಶ್ಲಾಘನೀಯ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮೀಜಿ ಹೇಳಿದರು. 
ತಾಲೂಕಿನ ಯದ್ಯಾನವಾಡಿ ಗ್ರಾಮದ ಸಿದ್ಧಾರೂಢ ಮಠದ ಸಮುದಾಯ ಭವನದಲ್ಲಿ  ಈಚೆಗೆ ಹಮ್ಮಿಕೊಂಡಿದ್ದ `ಶ್ರೀಗಳ ನಡಿಗೆ ಹಳ್ಳಿ ಕಡೆಗೆ' ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರವಚನ ಮನಸ್ಸಿಗೆ ಶಾಂತಿ, ಸಮಾಧಾನ ನೀಡುತ್ತದೆ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎಸ್.ಎ.ಪಾಟೀಲ, ಸಂಗೀತ ಸೇವೆಯನ್ನು ನವಲಿಹಾಳದ ಅಲಿಸಾಬ್ ಬಹುರೂಪಿ ಹಾಗೂ ತಬಲಾ ಸೇವೆಯನ್ನು ಬಡಕುಂದ್ರಿಯ ಕಾಳಪ್ಪ ಬಡಿಗೇರ ಒದಗಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net