ಚಿಕ್ಕೋಡಿಯ ಚೌಸನ್ ನರ್ಸರಿ ಶಾಲೆಯ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಚೌಸನ್ ಅರ್ಜುನ ಕ್ರೀಡಾ ಪುರಸ್ಕಾರ ಸಮಾರಂಭದಲ್ಲಿ ಸುರೇಂದ್ರನಾಥ ಚೌಗುಲೆ, ಸವಿತಾ ಹೆಗಡೆ, ಕವಿತಾ ಹರಕೆ ಇತರರಿದ್ದರು.
ಚಿಕ್ಕೋಡಿ: ಕ್ರೀಡೆ ಶೈಕ್ಷಣಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಚೌಸನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಂದ್ರನಾಥ ಚೌಗುಲೆ ಹೇಳಿದರು.
ಪಟ್ಟಣದ ಚೌಸನ್ ನರ್ಸರಿ ಶಾಲೆಯಲ್ಲಿ ಚೌಸನ್ ಫೌಂಡೇಷನ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಚೌಸನ್ ಅರ್ಜುನ ಕ್ರೀಡಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಕ್ರೀಡೆ ಸಹಕಾರಿಯಾಗಿದೆ. ಮಕ್ಕಳ ದೈಹಿಕ ಆರೋಗ್ಯದ ಹಿತದೃಷ್ಠಿಯಿಂದ ಚೌಸನ್ ಫೌಂಡೇಷನ್ ವತಿಯಿಂದ ಅರ್ಜುನ ಕ್ರೀಡಾ ಪ್ರಶಸ್ತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕ್ರೀಡೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
ನಿರ್ದೇಶಕರಾದ ಸವಿತಾ ಹೆಗಡೆ, ಶಿಕ್ಷಕಿಯರಾದ ಕವಿತಾ ಹರಕೆ, ಆಸ್ಮಾ ಜಮಾದಾರ, ಉಜ್ವಲಾ ಮಾನೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಸವರಾಜ ಮುತ್ತನಾಳ ಇತರರಿದ್ದರು.