ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಲಿ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಕ್ತರೊಂದಿಗೆ ಕುಳಿತು ಗ್ರಂಥರಾಜ ಸಾಂಪ್ರದಾಯಿಕ ಪಾರಾಯಣ ಆಲಿಸಿದರು.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಕ್ತರೊಂದಿಗೆ ಕುಳಿತು ಗ್ರಂಥರಾಜ ಸಾಂಪ್ರದಾಯಿಕ ಪಾರಾಯಣ ಆಲಿಸಿದರು.
Published on
ಬೆಳಗಾವಿ: ಭಾರತ ಮಹಾನ್ ದೇಶ, ನಮ್ಮ ಸಂಸ್ಕೃತಿ ಉನ್ನತವಾದದ್ದು. ಮಕ್ಕಳಿಗೆ ನಮ್ಮ ಸಂಸ್ಕೃತಿ ಕುರಿತು ತಿಳಿಸಲು ಪಾಲಕರು ಸಮಯ ಮೀಸಲಿಡಬೇಕು. ಮಹಾನ್ ಪುರುಷರು, ಇತಿಹಾಸ ಕುರಿತೂ ತಿಳಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಮುತಗಾ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗ್ರಂಥರಾಜ ಸಾಂಪ್ರದಾಯಿಕ ಪಾರಾಯಣ ಸೋಹಳಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾದ್ವಿ ರುಕ್ಷ್ಮಿಣಿತಾಯಿ ಹಾವರೆ ಅವರ ಮಾತುಗಳನ್ನು ಆಲಿಸಿ ಮಾತನಾಡಿ, 25 ವರ್ಷದಿಂದ ಬೆಳಗ್ಗೆಯಿಂದ ರಾತ್ರಿವರೆಗೆ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ.
ರೈತ ಕುಟುಂಬದಿಂದ ಬಂದು, ಸರ್ಕಾರಿ ಶಾಲೆಯಲ್ಲಿ ಕಲಿತು, ಸರ್ಕಾರಿ ಬಸ್‌ನಲ್ಲಿ ಓಡಾಡಿ, ಹೆಚ್ಚು ಕಲಿಯಲು ಅವಕಾಶವಿಲ್ಲದಿದ್ದರೂ ಸಮಾಜ ಸೇವೆಯಿಂದಲೇ ಈ ಹಂತಕ್ಕೆ ಬಂದಿದ್ದೇನೆ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟು, ಜನ ಸೇವೆಯೇ ಜನಾರ್ದನ ಸೇವೆ ಎಂದು ಕ್ಷೇತ್ರದ ಸೇವೆ ಮಾಡುತ್ತಿದ್ದೇನೆ ಎಂದರು.
ಚೇತನ ಚೌಗುಲೆ, ಸಚಿನ ಪಾಟೀಲ, ಶಿವಾಜಿ ಪಾಟೀಲ, ಬಾಬು ಪಾಟೀಲ, ಯಲ್ಲಪ್ಪ ಕೇದಾರ, ನಾಗೇಶ ದೇಸಾಯಿ, ಗಜಾನನ ಕಣಬರಕರ, ರಾಯಣ್ಣ ಕಾಕಾ, ಶರದ, ಪಿಂಟು ಇತರರಿದ್ದರು.
ಕಾಮಗಾರಿಗಳಿಗೆ ಚಾಲನೆ: ಉಚಗಾಂವ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೀರದೇವರ ಸಮುದಾಯ ಭವನದ ಮೇಲ್ಛಾವಣಿ, ತುರಮರಿ ಗ್ರಾಮದಲ್ಲಿ 80 ಲಕ್ಷ ರೂ. ವೆಚ್ಚದ ಹಾಗೂ ಬಾಚಿ ಗ್ರಾಮದಲ್ಲಿ 72 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಭಾನುವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು.
ಕ್ರಿಕೆಟ್‌ಗೆ ಚಾಲನೆ: ಕೆಕೆ ಕೊಪ್ಪ ಗ್ರಾಮದಲ್ಲಿ ಹರ್ಷಾ ಶುಗರ್ಸ್ ವತಿಯಿಂದ ಆಯೋಜಿಸಿರುವ ಹರ್ಷಾ ಶುಗರ್ಸ್ ಕೆಪಿಎಲ್ -2026 ಕ್ರಿಕೆಟ್ ಪಂದ್ಯಾವಳಿಗೆ ಭಾನುವಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸುವುದು ಯುವಕರಲ್ಲಿ ಶಿಸ್ತು, ತಂಡಭಾವನೆ ಮತ್ತು ನಾಯಕತ್ವ ಗುಣ ಬೆಳೆಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net