ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ

ನಂದಗಾಂವ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆ ಶ್ರೀಮತಿ ತನುಜಾ ಪಾಟೀಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸತ್ಕಾರ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ತಾತ್ಯಾಸಾಬ ಯಲಿಗೌಡ, ಶ್ರೀಕಾಂತ ಅಸ್ಕಿ, ಪುಷ್ಪಕುಮಾರ ಪಾಟೀಲ, ಅಭಯ ಪಾಲಭಾವಿ, ಅರುಣ ಯಲಗುದ್ರಿ ಇತರರಿದ್ದರು.
ನಂದಗಾಂವ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆ ಶ್ರೀಮತಿ ತನುಜಾ ಪಾಟೀಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸತ್ಕಾರ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ತಾತ್ಯಾಸಾಬ ಯಲಿಗೌಡ, ಶ್ರೀಕಾಂತ ಅಸ್ಕಿ, ಪುಷ್ಪಕುಮಾರ ಪಾಟೀಲ, ಅಭಯ ಪಾಲಭಾವಿ, ಅರುಣ ಯಲಗುದ್ರಿ ಇತರರಿದ್ದರು.
Published on

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಂಸ್ಕಾರದ ಪಾಠ ಮಾಡಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಗುರುಗಳದ್ದಾಗಿದ್ದು, ಪಾಲಕರು ಮಕ್ಕಳನ್ನು ಅಂಕಗಳಿಗೆ ಸೀಮಿತಗೊಳಿಸದೆ ಮಾನವೀಯ ಮೌಲ್ಯ ಬೆಳೆಸಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ತಾತ್ಯಾಸಾಬ ಯಲಿಗೌಡ ಹೇಳಿದರು.

ಅಥಣಿ ತಾಲೂಕಿನ ನಂದಗಾಂವ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ಶ್ರೀಮತಿ ತನುಜಾ ಪಾಟೀಲ ಪ್ರೌಢಶಾಲೆಯಲ್ಲಿ ೧೯೯೩ರಿಂದ ೨೦೨೬ರವರೆಗಿನ ಎಸ್‌ಎಸ್‌ಎಲ್‌ಸಿ ಓದಿದ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಎಷ್ಟೇ ದೊಡ್ಡ ವ್ಯಕ್ತಿಗಳಾಗಿ ಹುದ್ದೆ ಪಡೆದು ಹಣ, ಕಾರು, ಬಂಗಲೆ ಗಳಿಸಿದ್ದರೂ ಬಾಲ್ಯದ ಸ್ನೇಹ, ತುಂಟಾಟ, ಜಗಳ,
ಸ್ಪರ್ಧೆಗಳಂತಹ ನೆನಪುಗಳಿಗೆ ಬೆಲೆ ಕಟ್ಟಲಾಗದು ಎಂದರು.
ವರ್ಧಮಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ಅಸ್ಕಿ ಮಾತನಾಡಿ, ಕಲಿತ ಶಾಲೆ ದೇವಸ್ಥಾನಕ್ಕಿಂತ ಶ್ರೇಷ್ಠವಾದರೆ, ವಿದ್ಯೆ ನೀಡಿದ ಗುರುಗಳು ಜೀವಂತ ದೇವರು. ಗುರುಗಳನ್ನು ಸದಾ ಸ್ಮರಿಸಬೇಕು. ಶಾಲೆ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಎಸ್.ಕೆ.ಮರಗೆಪ್ಪಗೋಳ, ಮಹಾಬಲ ಶೆಟ್ಟಿ, ಪುಷ್ಪಕುಮಾರ ಪಾಟೀಲ, ಮುಖ್ಯಶಿಕ್ಷಕ ಅಭಯ ಪಾಲಭಾವಿ, ಅರುಣ ಯಲಗುದ್ರಿ, ವೆಂಕಪ್ಪ ಬಳೋಜ, ಸತ್ಯಪ್ಪ ಬಾಗೆಣ್ಣವರ, ಧರೆಪ್ಪ ತೇರದಾಳ, ಹನುಮಂತ ಶೇಗುಣಶಿ, ಸಿದ್ದಪ್ಪ ಇಚೇರಿ, ಮಹಾವೀರ ಬಸಗೌಡರ, ಕಲಗೌಡ ಪಾಟೀಲ, ಐಶ್ವರ್ಯಾ ಝುಂಜರವಾಡ, ಸಿದ್ದು ಗೊಂದಳಿ ಇತರರಿದ್ದರು. ನಿಂಗಪ್ಪ ದರೂರ ಸ್ವಾಗತಿಸಿದರು. ವೈ.ಎ.ಜಮಾದಾರ ನಿರೂಪಿಸಿದರು. ಎಂ.ಬಿ.ನಾಗರಾಳ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net