ಹಲಗಿ ವಾದನ ಸ್ಪರ್ಧೆ: ಭಾನುವಾರ ನಡೆದ ಹಲಗಿವಾದನ ಸ್ಪರ್ಧೆಯಲ್ಲಿ ಮಹಾರಾಷ್ಟçದ ಕುರುಂದವಾಡದ ರಣವೀರ ಆವಳೆ ಪ್ರಥಮ ಸ್ಥಾನ ಪಡೆದು ೧೦ ಸಾವಿರ ರೂ. ಬಹುಮಾನ ಪಡೆದರು. ಕೊಲ್ಲಾಪುರದ ಸಾಗರ ಸಾಠೆ ದ್ವಿತೀಯ ಸ್ಥಾನದೊಂದಿಗೆ ೭.೫ ಸಾವಿರ ರೂ. ಬಹುಮಾನ, ಪಾಚಗಾವ್‌ನ ಯುವರಾಜ ಗಾಯಕವಾಡ ತೃತೀಯ ಸ್ಥಾನದೊಂದಿಗೆ ೫ ಸಾವಿರ ರೂ. ಬಹುಮಾನ, ಯಡ್ರಾವನ ಸೌರಭ ಅಡವಾಣೆ ನಾಲ್ಕನೇಯ ಸ್ಥಾನದೊಂದಿಗೆ ೩ ಸಾವಿರ ರೂ. ಬಹುಮಾನ ಮತ್ತು ಸಾಂಗಾವ್‌ನ ಕೃಷ್ಣಾತ ಘುಳೆ ಐದನೇಯ ಸ್ಥಾನದೊಂದಿಗೆ ೨ ಸಾವಿರ ರೂ. ಬಹುಮಾನ ಪಡೆದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕಿ ಶಶಿಕಲಾ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ವಿಜೇತರಿಗೆ ಬಹುಮಾನ ವಿತರಿಸಿದರು. ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಇತರರು ಇದ್ದರು.