ಅಭಿವೃದ್ಧಿಗೆ ಪಕ್ಷಾತೀತ ಬೆಂಬಲ ಅಗತ್ಯ

ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಶಾಸಕ ವಿಠ್ಠಲ ಹಲಗೇಕರ, ದಿಗಂಬರ ಪಾಟೀಲ, ಮುರಳೀಧರ ಪಾಟೀಲ, ಕೆ.ಪಿ.ಪಾಟೀಲ, ಬಾಬುರಾವ್ ದೇಸಾಯಿ, ಗೋಪಾಲ ದೇಸಾಯಿ ಇತರರಿದ್ದರು.
ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಶಾಸಕ ವಿಠ್ಠಲ ಹಲಗೇಕರ, ದಿಗಂಬರ ಪಾಟೀಲ, ಮುರಳೀಧರ ಪಾಟೀಲ, ಕೆ.ಪಿ.ಪಾಟೀಲ, ಬಾಬುರಾವ್ ದೇಸಾಯಿ, ಗೋಪಾಲ ದೇಸಾಯಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ವಿಠ್ಠಲ ಹಲಗೇಕರ ಹೇಳಿಕೆ
  • ಸರ್ವಪಕ್ಷ, ಸಾರ್ವಜನಿಕರ ಸಭೆ
ಖಾನಾಪುರ: ಕ್ಷೇತ್ರದ ಸರ್ವಾಂಗೀಣ ಏಳಿಗೆ ಯಾವುದೇ ಒಬ್ಬ ವ್ಯಕ್ತಿ, ಪಕ್ಷದ ಕಾಳಜಿಯಲ್ಲ, ತಾಲೂಕಿನ ಕಾಳಜಿಯಾಗಿದೆ. ಹೀಗಾಗಿ, ಖಾನಾಪುರ ಅಭಿವೃದ್ಧಿಗೆ ರಾಜಕೀಯ ಬದಿಗಿಟ್ಟು ಒಟ್ಟಾಗಿ ಶ್ರಮಿಸಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ರಾಜಾ ಶಿವಛತ್ರಪತಿ ಶಿವಸ್ಮಾರಕ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕರು ಹಾಗೂ ಸರ್ವಪಕ್ಷ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಮೂಲ ಸೌಕರ್ಯ ಹಾಗೂ ಬಾಕಿ ಕಾಮಗಾರಿ ಪಟ್ಟಿ ಸಿದ್ಧಪಡಿಸಬೇಕು. ವಿಬಿಜಿ ರಾಮ್‌ಜಿ ಯೋಜನೆಯಡಿ ಗ್ರಾಪಂಗಳಿಗೆ ಕೋಟ್ಯಂತರ ರೂಪಾಯಿ ಒದಗಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಜತೆಗೆ ಗ್ರಾಪಂ ಮಟ್ಟದಲ್ಲಿ `ಜನ ಸ್ಪಂದನ' ಕಾರ್ಯಕ್ರಮ ನಡೆಸಲಾಗುವುದು ಎಂದರು.
ಪಟ್ಟಣದ ಮೀನು ಮಾರುಕಟ್ಟೆ ಬಳಿ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಗಣೇಶ ಚತುರ್ಥಿಗೂ ಮುನ್ನ ತಾತ್ಕಾಲಿಕ ರಸ್ತೆ ಒದಗಿಸಲಾಗುವುದು. ಪರಿಸರ ಸೂಕ್ಷ್ಮ ವಲಯದೊಳಗಿನ ೮೦೬ ಕಿ.ಮೀ ರಸ್ತೆಗಳಲ್ಲಿ ಸ್ಥಗಿತಗೊಂಡಿರುವ ಕೆಲಸ ತ್ವರಿತವಾಗಿ ಪೂರ್ಣಗೊಳಿಸಲು ಅರಣ್ಯ ಸಂರಕ್ಷಣಾ ಕಾಯ್ದೆ ಅನುಮತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ವಿಷಯ ಚರ್ಚೆ: ಸಭೆಯಲ್ಲಿ ರಸ್ತೆ, ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಉದ್ಯೋಗ, ಅತಿಕ್ರಮಣ, ಮಾರುಕಟ್ಟೆ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ಹಲವಾರು ವಿಷಯ ಚರ್ಚಿಸಲಾಯಿತು.
ಮಾಜಿ ಶಾಸಕ ದಿಗಂಬರ ಪಾಟೀಲ, ತಹಸೀಲ್ದಾರ್ ದುಂಡಪ್ಪ ಕೋಮಾರ, ಜಿಪಂ ಮಾಜಿ ಸದಸ್ಯಬಾಬುರಾವ ದೇಸಾಯಿ, ವಿಲಾಸ ಬೆಳಗಾಂವಕರ, ಪ್ರಮೋದ ಕೋಚೇರಿ, ಸದಾನಂದ ಪಾಟೀಲ, ಜಯಂತ ತಿನೇಕರ, ರಂಜಿತ ಪಾಟೀಲ, ಇರ್ಫಾನ್ ತಾಳಿಕೋಟಿ, ಯಶವಂತ ಬಿರ್ಜೆ, ಮಲ್ಲಪ್ಪ ಮಾರಿಹಾಳ, ಶಂಕರ ತೋಪಿನಕಟ್ಟಿ, ಶಿವಶಂಕರ ಮಡ್ಡಿಮನಿ, ಶ್ರೀಕಾಂತ ಇಟಗಿ, ವಿಠ್ಠಲ ಹಿಂಡಲಕರ, ರಾಜಶೇಖರ ಹಿಂಡಲಗಿ, ನಾರಾಯಣ ಗುರವ, ಬಲರಾಮ ಶೇಲಾರ ಇತರರಿದ್ದರು.
"

ಮರಾಠಿ ಮಾಧ್ಯಮ ಶಾಲೆಗಳಲ್ಲಿ ೨೦೦ ಬೋಧಕ ಹುದ್ದೆಗಳಿಗೆ ಅನುಮೋದನೆ ಪಡೆಯಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಪಟ್ಟಣದ ಹಳೆಯ ನ್ಯಾಯಾಲಯದ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪ್ರಯತ್ನಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net