ನೆಟ್‌ಬ್ಯಾಂಕ್ ಸೇವೆ ಆರಂಭ ಶೀಘ್ರ

ಅಳಗವಾಡಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಕುಲಗುಡೆ ಅವರನ್ನು ಸತ್ಕರಿಸಲಾಯಿತು. ಕುಮಾರ ಬನಶಂಕರಿ, ಮಹಾದೇವ ಶಿರಗೂರೆ, ಮಾರುತಿ ಪಡಚೆ, ರೇವಣ್ಣ ಸರವ ಇತರರಿದ್ದರು.
ಅಳಗವಾಡಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಕುಲಗುಡೆ ಅವರನ್ನು ಸತ್ಕರಿಸಲಾಯಿತು. ಕುಮಾರ ಬನಶಂಕರಿ, ಮಹಾದೇವ ಶಿರಗೂರೆ, ಮಾರುತಿ ಪಡಚೆ, ರೇವಣ್ಣ ಸರವ ಇತರರಿದ್ದರು.
Published on
ಅಳಗವಾಡಿ: ವಾಣಿಜ್ಯ ಬ್ಯಾಂಕುಗಳಂತೆ ಡಿಸಿಸಿ ಬ್ಯಾಂಕಿನಿಂದ ನೆಟ್ ಬ್ಯಾಂಕ್ ಸೇವೆಗಳಾದ ಫೋನ್ ಪೇ ಹಾಗೂ ಗೂಗಲ್ ಪೇ ಸೇವೆಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಅಪ್ಪಾಸಾಬ ಕುಲಗುಡೆ ಹೇಳಿದರು.
ಗುರುವಾರ ಸ್ಥಳೀಯ ಹನುಮಮಂದಿರದಲ್ಲಿ ಆಯೋಜಿಸಿದ್ದ ಗ್ರಾಮದ ಸ್ವರಾಜ್ ಪಿಕೆಪಿಎಸ್‌ನ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕಿನಿಂದ ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಕರೆನ್ನವರ, ಹನುಮಂತ ಗುರವ, ಸ್ವರಾಜ್ ಪಿಕೆಪಿಎಸ್ ಅಧ್ಯಕ್ಷ ಕುಮಾರ ಬನಶಂಕರಿ, ಜಿಪಂ ಮಾಜಿ ಸದಸ್ಯ ಮಹಾದೇವ ಶಿರಗೂರೆ, ಕನಕದಾಸ ಪಿಕೆಪಿಎಸ್ ಅಧ್ಯಕ್ಷ ಮಾರುತಿ ಪಡಚೆ, ರೇವಣಸಿದ್ಧೇಶ್ವರ ಪಿಕೆಪಿಎಸ್ ಅಧ್ಯಕ್ಷ ರೇವಣ್ಣ ಸರವ, ರೈತರು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net