ಮಹಾವೀರ ಜಯಂತಿ ಆಚರಣೆಗೆ ನಿರ್ಲಕ್ಷ್ಯ

ಹುಕ್ಕೇರಿ ತಹಸೀಲ್ದಾರ್ ಕಚೇರಿ ಹೊರಗೆ ಜೈನ ಸಮುದಾಯದವರು ಭಗವಾನ ಮಹಾವೀರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದರು. ಮಹಾವೀರ ನಿಲಜಗಿ, ಪಿ.ಆರ್.ಚೌಗಲಾ, ಬಾಹುಬಲಿ ನಾಗನೂರಿ ಇತರರಿದ್ದರು.
ಹುಕ್ಕೇರಿ ತಹಸೀಲ್ದಾರ್ ಕಚೇರಿ ಹೊರಗೆ ಜೈನ ಸಮುದಾಯದವರು ಭಗವಾನ ಮಹಾವೀರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದರು. ಮಹಾವೀರ ನಿಲಜಗಿ, ಪಿ.ಆರ್.ಚೌಗಲಾ, ಬಾಹುಬಲಿ ನಾಗನೂರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೈನ ಸಮುದಾಯ ಆರೋಪ
  • ತಾಲೂಕಾಡಳಿತ ವಿರುದ್ಧ ಆಕ್ರೋಶ
ಹುಕ್ಕೇರಿ: ತಾಲೂಕಾಡಳಿತ ಮಹಾವೀರ ಜಯಂತಿ ಆಚರಣೆಯಲ್ಲಿ ಅಸಡ್ಡೆ ತೋರಿದೆ ಎಂದು ಆರೋಪಿಸಿದರು. ತಾಲೂಕು ಜೈನ ಅಸೋಸಿಯೇಷನ್‌ನವರು ತಹಸೀಲ್ದಾರ್ ಕಾರ್ಯಾಲಯ ಹೊರಗೆ ಮಹಾವೀರ ಭಾವಚಿತ್ರವಿಟ್ಟು ಸೋಮವಾರ ಪೂಜೆ ಸಲ್ಲಿಸಿದರು.
ಬೆಳಗ್ಗೆ ೯ ಗಂಟೆಯಾದರೂ ಅಽಕಾರಿಗಳು ಕಾರ್ಯಾಲಯಕ್ಕೆ ಬಂದಿರಲಿಲ್ಲ. ಸರಿಯಾದ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ. ಕಚೇರಿಗೆ ಬೀಗ ಹಾಕಿರುವುದನ್ನು ಕಂಡು ಆಕ್ರೋಶಗೊಂಡ ಜೈನ ಸಮುದಾಯದವರು ಮಹಾವೀರ ಜಯಂತಿ ಆಚರಣೆಗೆ ಅಸಡ್ಡೆ ತೋರಿರುವ ಕುರಿತು ಗ್ರೇಡ್-೨ ತಹಸೀಲ್ದಾರ್ ಪ್ರಕಾಶ ಕಲ್ಲೋಳಿ ಅವರನ್ನು ಪ್ರಶ್ನಿಸಿದರು. ಬಳಿಕ ಕಾರ್ಯಾಲಯ ಆವರಣದಲ್ಲಿ ಸ್ವಚ್ಛತೆ ಕೈಗೊಂಡು ಮಹಾವೀರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಹಿರಿಯ ವಕೀಲ ಪಿ.ಆರ್.ಚೌಗಲಾ, ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡರಾದ ಬಾಹುಬಲಿ ನಾಗನೂರಿ, ಸಂಜಯ ನಿಲಜಗಿ ಮಾತನಾಡಿ, ತಾಲೂಕಾಡಳಿತ ಭಗವಾನ ಮಹಾವೀರ ಜಯಂತಿಯನ್ನು ತಾತ್ಸಾರ ಭಾವನೆಯಿಂದ ಕಂಡು ಜೈನ ಸಮುದಾಯವನ್ನು ಅವಮಾನಿಸಿದೆ. ಈ ವರ್ತನೆ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. 
ಜೈನ ಸಮುದಾಯದ ಮುಖಂಡರಾದ ಕಲಗೌಡ ಮಲಗೌಡನವರ, ಅಶೋಕ ರಂಗೋಳಿ, ವಿದ್ಯಾಧರ ಹರಾರೆ, ಬಿ.ಬಿ.ಚೌಗಲಾ, ಪ್ರಕಾಶ ಚೌಗಲಾ, ಜಿನ್ನಪ್ಪ ಸಪ್ತಸಾಗರ, ಸಂಜೀವ ಮಗದುಮ್ಮ, ಕಾಡಪ್ಪ ಮಗದುಮ್ಮ, ಶ್ರೀಧರ ಖತಗಲ್ಲಿ, ವಿಪುಲ್ ಬಾಳಿಕಾಯಿ, ಎ.ಟಿ ಮುನ್ನೋಳಿ, ಮಂಜುಳಾ ಅಡಕೆ, ವೇಣುತಾಯಿ ಚೌಗಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net