ಅಧ್ಯಯನಕ್ಕೆ ಹೆಚ್ಚು ಸಮಯ ಮೀಸಲು ಅಗತ್ಯ

ಮಲ್ಲಾಪುರ ಕೆ ಎನ್ ಗ್ರಾಮದ ರೇವಣಸಿದ್ಧೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಚಿದಾನಂದ ಸ್ವಾಮೀಜಿ, ವೈ.ಎಸ್.ಪಾಟೀಲ, ಶಿವನಗೌಡ ಪಾಟೀಲ ಶಾಂತಾ ಗುರನಗೌಡರ ಇತರರಿದ್ದರು.
ಮಲ್ಲಾಪುರ ಕೆ ಎನ್ ಗ್ರಾಮದ ರೇವಣಸಿದ್ಧೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಚಿದಾನಂದ ಸ್ವಾಮೀಜಿ, ವೈ.ಎಸ್.ಪಾಟೀಲ, ಶಿವನಗೌಡ ಪಾಟೀಲ ಶಾಂತಾ ಗುರನಗೌಡರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಾಬಾಸಾಹೇಬ ಪಾಟೀಲ ಅನಿಸಿಕೆ
  • ಶಾಲಾ ಸ್ನೇಹಸಮ್ಮೇಳನ ಉದ್ಘಾಟನೆ
ನೇಸರಗಿ: ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಪಾಲಕರಿಗೆ ಹಾಗೂ ಕಲಿತ ಶಾಲೆಗೆ ಋಣಿಯಾಗಿರಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಮಲ್ಲಾಪುರ ಕೆ.ಎನ್ ಗ್ರಾಮದ ಗಾಳೇಶ್ವರ ಶಿಕ್ಷಣ ಸಂಸ್ಥೆಯ ರೇವಣಸಿದ್ಧೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪರೀಕ್ಷೆ ಸಮೀಪಿಸುತ್ತಿರುವುದರಿಂದ ಹೆಚ್ಚಿನ ಸಮಯ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದರು.
ಬೆಳಗಾವಿ ವಿಟಿಯು ಸಹಾಯಕ ಪ್ರಾಧ್ಯಾಪಕಿ ಡಾ.ಶಾಂತಾ ಗುರುನಗೌಡರ ಮಾತನಾಡಿ, ಭಾರತ ದೇಶ ಆರ್ಥಿಕವಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಕೈಗೊಳ್ಳಬೇಕೆಂದರು. ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಗಾಳೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವನಗೌಡ ಪಾಟೀಲ, ಕೆಎಲ್‌ಇ ಸಂಸ್ಥೆ ಉಪಾಧ್ಯಕ್ಷ ಬಸವರಾಜ ತಟವಾಟಿ, ನಿರ್ದೇಶಕರಾದ ವೈ.ಎಸ್.ಪಾಟೀಲ, ವಿಜಯ ಮೆಟಗುಡ್ಡ, ಸುನೀಲ ಮರಕುಂಬಿ, ಡಾ.ಪ್ರಕಾಶ ಹಳ್ಯಾಳ, ಆಸಿಫ್ ಸಾಹೇಬ್ ನದಾಫ್, ಎಸ್.ಎಂ.ಗಡೆಣ್ಣವರ, ವಿಜಯಮಹಾಂತೇಶ ಪಾಟೀಲ, ಮುಖ್ಯಶಿಕ್ಷಕ ಶರಣು ಎಂ.ಎಸ್., ಸಿ.ಎನ್.ತಿರಕಣ್ಣವರ, ಬಸನಗೌಡ ದೊಡಗೌಡರ, ಅಡಿವೆಪ್ಪ ದಳವಾಯಿ, ಎಸ್.ಜಿ.ಚಿಟ್ನಿಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net