14ರಂದು ರಾಷ್ಟ್ರೀಯ ಲೋಕ ಅದಾಲತ್

ರಾಯಬಾಗ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಜಗದೀಶ ಬಿಸೇರೊಟ್ಟಿ ಮಾತನಾಡಿದರು. ಕೆ.ಆರ್.ಕೋಟಿವಾಲೆ, ಆರ್.ಎಸ್.ಹಳ್ಳಪ್ಪಗೋಳ, ಎನ್.ಎಂ.ಯಡವನ್ನವರ, ಟಿ.ಕೆ.ಶಿಂಧೆ, ಎಲ್.ಎಚ್.ನಾಗರಮುನ್ನೊಳ್ಳಿ ಇತರರಿದ್ದರು.
ರಾಯಬಾಗ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಜಗದೀಶ ಬಿಸೇರೊಟ್ಟಿ ಮಾತನಾಡಿದರು. ಕೆ.ಆರ್.ಕೋಟಿವಾಲೆ, ಆರ್.ಎಸ್.ಹಳ್ಳಪ್ಪಗೋಳ, ಎನ್.ಎಂ.ಯಡವನ್ನವರ, ಟಿ.ಕೆ.ಶಿಂಧೆ, ಎಲ್.ಎಚ್.ನಾಗರಮುನ್ನೊಳ್ಳಿ ಇತರರಿದ್ದರು.
Published on
ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಬೃಹತ್ ಲೋಕ ಅದಾಲತ್‌ನಲ್ಲಿ ನ್ಯಾಯಾಲಯಕ್ಕೆ ಬರುವ ಪಕ್ಷಗಾರರು ತಮ್ಮ ವ್ಯಾಜ್ಯ ರಾಜಿ ಸಂಧಾನ ಮೂಲಕ ಬಗೆ ಹರಿಸಿಕೊಳ್ಳಲು ಮತ್ತು ನ್ಯಾಯ ಪಡೆಯಲು ಒಳ್ಳೆಯ ಸದಾವಕಾಶ ಎಂದರು.
ಲೋಕ ಅದಾಲತ್‌ದಲ್ಲಿ ಆಸ್ತಿ, ದಾಂಪತ್ಯ, ವಾಹನ ಪರಿಹಾರ ಕುರಿತ ವ್ಯಾಜ್ಯಗಳು, ಜೀವನಾಂಶ ಕುರಿತ ಪ್ರಕರಣ, ಚೆಕ್ ಬೌನ್ಸ್ ಸೇರಿ ವಿವಿಧ ಪ್ರಕರಣ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಿಕೊಂಡರೆ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದರು.
ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೊಂಡ ಪ್ರಕರಣವನ್ನು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ವಕೀಲರು ಪಕ್ಷಗಾರರ ಪ್ರಕರಣ ಕಾನೂನು ಚೌಕಟ್ಟಿನಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಪ್ರಯತ್ನಿಸಬೇಕೆಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ಕಾರ್ಯದರ್ಶಿ ಆರ್.ಎಸ್.ಹಳ್ಳಪ್ಪಗೋಳ, ಎನ್.ಎಂ.ಯಡವನ್ನವರ, ಟಿ.ಕೆ.ಶಿಂಧೆ, ಎಲ್.ಎಚ್.ನಾಗರಮುನ್ನೊಳ್ಳಿ, ಎಸ್.ಎಂ.ಕಳ್ಳೆ, ಪಿ.ಎಸ್.ಕುರಬೇಟ, ಪಿ.ಆರ್.ಕಡಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net