ಫೆ. 8ರಂದು ಜರುಗಲಿರುವ ರಾಷ್ಟ್ರಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಇದರಲ್ಲಿ ಭಕ್ತಿ ಪಂಥದಲ್ಲಿ ಕೆಲಸ ಮಾಡಿದಂತಹ ಎಲ್ಲಾ ಧರ್ಮದವರ ಸಂತರ ಭಾವಚಿತ್ರ ಬಿಡಿಸಲು ಅವಕಾಶ ಕಲ್ಪಿಸಲಾಗಿದೆ. ಫೆ. 9ರಂದು ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆ ಹಾಗೂ ಫೆ.10 ಸಂಗೀತ ಸ್ಪರ್ಧೆಗಳು ನಡೆಯಲಿದ್ದು,ಈ ಎಲ್ಲಾ ಸ್ಪರ್ಧೆಗಳಿಗೂ ಒಂದರಿಂದ ಮೂರು ಆಕರ್ಷಕ ಬಹುಮಾನ, ಸ್ಮರಿಣಿಕೆಗಳು ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ವಿವರಿಸಿದರು.