ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬುಧವಾರ ತಡರಾತ್ರಿ ನಡೆಸಲಾದ ತಪಾಸಣೆಯಲ್ಲಿ ವಿವಿಧ ಕಂಪನಿಗಳ ಐದು ಮೊಬೈಲ್, ನಾಲ್ಕು ಸಿಮ್ ಕಾರ್ಡ್, ಎರಡು ಯುಎಸ್‌ಬಿ ಕೇಬಲ್ ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈವರೆಗೆ ನಡೆಸಲಾದ ತಪಾಸಣೆಗಳಲ್ಲಿ ಡಿ.17ರಂದು 366 ಗ್ರಾಂ ಗಾಂಜಾ, ಡಿ.16ರಂದು 4 ಮೊಬೈಲ್, 1 ಯುಸ್‌ಬಿ ಕೇಬಲ್, ಡಿ.23ರಂದು 2 ಮೊಬೈಲ್, 1 ಚಾರ್ಜರ್, 3 ಯುಎಸ್‌ಬಿ ಕೇಬಲ್, ಡಿ.23ರಂದು 2 ಮೊಬೈಲ್, 1 ಚಾರ್ಜರ್ ಪತ್ತೆಯಾಗಿವೆ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.