ಭಕ್ತರಿಗೆ ಸೌಕರ್ಯ ಕೊರತೆಯಾಗದಿರಲಿ

ಮೋದಗಾ ಗ್ರಾಮದ ಭಾವೇಶ್ವರಿ ದೇವಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿದರು. ಜಾವೇದ ಮುಷಾಪುರಿ, ಸ್ಮಿತಾ ಕೋಕಿತಕರ, ಸಂತೋಷ ಕಬ್ಬಗೋಳ ಇತರರಿದ್ದರು.
ಮೋದಗಾ ಗ್ರಾಮದ ಭಾವೇಶ್ವರಿ ದೇವಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿದರು. ಜಾವೇದ ಮುಷಾಪುರಿ, ಸ್ಮಿತಾ ಕೋಕಿತಕರ, ಸಂತೋಷ ಕಬ್ಬಗೋಳ ಇತರರಿದ್ದರು.
Published on
ದಡ್ಡಿ: ಮೋದಗಾ ಭಾವೇಶ್ವರಿ ಜಾತ್ರೆ ಫೆ.೨ರಿಂದ ೪ರ ವರೆಗೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಕುಡಿಯುವ ನೀರು, ದೇವಸ್ಥಾನದ ಸುತ್ತ ಬೆಳಕಿನ ವ್ಯವಸ್ಥೆ ಸೇರಿ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಸೂಚಿಸಿದರು.
ಮೋದಗಾ ಗ್ರಾಮದ ಭಾವೇಶ್ವರಿ ದೇವಸ್ಥಾನದ ಸಭಾಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಯಮಕನಮರಡಿ ಸಿಪಿಐ ಜಾವೇದ್ ಮುಷಾಪುರಿ ಮಾತನಾಡಿ, ಜಾತ್ರೆಯಲ್ಲಿ ವಾಹನಗಳ ಸಂಚಾರ ದಟ್ಟಣೆಗೆ ಕ್ರಮ ವಹಿಸಲಾಗುವುದು. ಭಕ್ತರು ಸರತಿಯಲ್ಲಿ ದೇವಿ ದರ್ಶನ ಪಡೆಯಬೇಕು. ಭದ್ರತೆಗಾಗಿ ಡಿಆರ್ ತುಕಡಿ ನಿಯೋಜನೆ ಮಾಡಲಾಗುವುದು ಎಂದರು.
ಪಿಡಿಒ ಸಂತೋಷ ಕಬ್ಬಗೋಳ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ದುರಸ್ಥಿ ಮಾಡಿಕೊಳ್ಳಲಾಗಿದೆ. ಬೀದಿ ದೀಪ ವ್ಯವಸ್ಥೆ ಸೇರಿ ಬೀದಿ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಸ್ಮಿತಾ ಕೋಕಿತಕರ, ಜಾತ್ರಾ ಕಮಿಟಿ ಅಧ್ಯಕ್ಷ ಬಾಪುರಾವ ಪಾಟೀಲ, ಚಂದ್ರಕಾಂತ ಪಾಟೀಲ, ಸಂತರಾಮ ಪಾಟೀಲ, ದಯಾನಂದ ಪಾಟೀಲ, ಶರದ ಪಾಟೀಲ, ಸುಧಾಕರ ಪಾಟೀಲ, ಭಾಗೋಜಿ ಪಾಟೀಲ, ನಂದಕುಮಾರ ಪಾಟೀಲ, ಮಾರುತಿ ಪಾಟೀಲ, ಅಪ್ಪ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net