ಜಾತ್ರೋತ್ಸವ ಶಾಂತಿಯಿಂದ ನಡೆಯಲಿ

ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಗ್ರಾಮದೇವಿ ಲಕ್ಷ್ಮಿಗೆ ನಮಿಸಿದರು. ಮಹಾವೀರ ನಿಲಜಗಿ ಇತರರಿದ್ದರು.
ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಗ್ರಾಮದೇವಿ ಲಕ್ಷ್ಮಿಗೆ ನಮಿಸಿದರು. ಮಹಾವೀರ ನಿಲಜಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಂದ್ರಶೇಖರ ಶಿವಾಚಾರ್ಯರ ಸಲಹೆ
  • ಹುಕ್ಕೇರಿ ಗ್ರಾಮದೇವಿ ಉತ್ಸವಕ್ಕೆ ಚಾಲನೆ
ಹುಕ್ಕೇರಿ: ಜನರು ಸುಖ, ಶಾಂತಿ, ನೆಮ್ಮದಿಯಿಂದ ಬದುಕಲಿ ಎಂದು ೩ ವರ್ಷಕ್ಕೊಮ್ಮೆ ಲಕ್ಷ್ಮಿದೇವಿ ಜಾತ್ರೆ ಆಚರಿಸಲಾಗುತ್ತದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಗ್ರಾಮದೇವಿ ಲಕ್ಷ್ಮಿ ಪೂಜೆ ಸಲ್ಲಿಸಿ, ಉಡಿ ತುಂಬಿ ಮಾತನಾಡಿದ ಅವರು, ಕೋಮು ಸೌಹಾರ್ದಕ್ಕೆ ಹೆಸರಾದ ಹುಕ್ಕೇರಿ ಪಟ್ಟಣದಲ್ಲಿ ಜಾತ್ಯತೀತ ಜಾತ್ರೆ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಹಿರಿಯರ ಮಾರ್ಗದರ್ಶನದಲ್ಲಿ ಶಾಂತಿಯಿಂದ ಹೊನ್ನಾಟ, ಉತ್ಸವ ನಡೆಸಬೇಕು ಎಂದರು. ಬೆಳಗ್ಗೆ ದೇವಿ ಪ್ರಾಣ ಪ್ರತಿಷ್ಠಾಪನೆ ಪೂಜೆ, ಕನ್ನಡಿ ದರ್ಶನದ ಬಳಿಕ ಹೊನ್ನಾಟ ಆರಂಭವಾಯಿತು. ರಾತ್ರಿ ದೇವಿ ಹಕ್ಕುದಾರರ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಜರುಗಿತು.
ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಮಾತನಾಡಿ, ಶಾಸಕ ನಿಖಿಲ ಕತ್ತಿ ಸೂಚನೆಯಂತೆ ಭಕ್ತರಿಗೆ ಶುದ್ಧ ಕುಡಿಯುವ ನೀರು, ಶುಚಿತ್ವ, ಸುಗಮ ಸಂಚಾರಕ್ಕೆ ಕ್ರಮ ವಹಿಸಲಾಗಿದ್ದು, ವಿಶ್ವರಾಜ ಶುರ‍್ಸ್ನಿಂದ ೫ ಕಡೆ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.
ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಅನಿಲ ಶೆಟ್ಟಿ, ಪ್ರಜ್ವಲ್ ನಿಲಜಗಿ, ಸುಭಾಸ ನಾಯಿಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net