ಸಮುದಾಯ ಭವನ ಸದ್ಬಳಕೆಯಾಗಲಿ

ಐಗಳಿ ಗ್ರಾಮದಲ್ಲಿ ಸಮುದಾಯ ಭವನ ಕಾಮಗಾರಿಗೆ ಯುವನಾಯಕ ಚಿದಾನಂದ ಸವದಿ ಹಾಗೂ ಸಿ.ಎಸ್. ನೇಮಗೌಡ ಚಾಲನೆ ನೀಡಿದರು. ಆರ್.ಆರ್.ತೆಲಸಂಗ, ಬಿ.ಎಸ್.ಬಿರಾದಾರ ಇತರರಿದ್ದರು.
ಐಗಳಿ ಗ್ರಾಮದಲ್ಲಿ ಸಮುದಾಯ ಭವನ ಕಾಮಗಾರಿಗೆ ಯುವನಾಯಕ ಚಿದಾನಂದ ಸವದಿ ಹಾಗೂ ಸಿ.ಎಸ್. ನೇಮಗೌಡ ಚಾಲನೆ ನೀಡಿದರು. ಆರ್.ಆರ್.ತೆಲಸಂಗ, ಬಿ.ಎಸ್.ಬಿರಾದಾರ ಇತರರಿದ್ದರು.
Published on
ಐಗಳಿ: ಜನರ ಬೇಡಿಕೆಗೆ ಸ್ಪಂದಿಸಿ ಶಾಸಕ ಲಕ್ಷ್ಮಣ ಸವದಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಗ್ರಾಮದ ಭರಮಪ್ಪ ದೇವಸ್ಥಾನ ಹತ್ತಿರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗುರುವಾರ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಹಿರಿಯರಾದ ಸಿ.ಎಸ್.ನೇಮಗೌಡ, ಆರ್.ಆರ್.ತೆಲಸಂಗ, ಬಿ.ಎಸ್.ಬಿರಾದಾರ, ಕೃಷ್ಣಾ ಶುಗರ್ಸ್‌ ನಿರ್ದೇಶಕ ಪ್ರಹ್ಲಾದ ಪಾಟೀಲ, ಯುವ ಮುಖಂಡ ಎ.ಎಸ್.ಪಾಟೀಲ, ಜಿ.ಎಸ್.ಬಿರಾದಾರ, ಬಸವರಾಜ ಬಿರಾದಾರ, ಭೈರಪ್ಪ ಬಿಜ್ಜರಗಿ, ಅಪ್ಪು ಮಾಳಿ, ದುಂಡಪ್ಪ ದೊಡ್ಮನಿ, ಸುರೇಶ ಬಿಜ್ಜರಗಿ, ಮನೋಹರ ಕಾಂಬಳೆ, ರಾಚಪ್ಪ ಮಾದರ, ಶೆಟ್ಟೆಪ್ಪ ಮಾದರ, ಸುರೇಶ ಮಾದರ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಆಕಾಶ ಮಾದರ, ಉಪಾಧ್ಯಕ್ಷ ಸಚಿನ ಮಹಾಲಿಂಗಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net