ಎಲ್ಲರೂ ಇಷ್ಟಲಿಂಗ ದೀಕ್ಷೆ ಪಡೆಯಲಿ

ಶೇಗುಣಸಿ ಕಾಡಸಿದ್ಧೇಶ್ವರಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಯಾತ್ರೆ ಹಾಗೂ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿದರು.  ಡಾ.ಮಹಾಂತಪ್ರಭು ಸ್ವಾಮೀಜಿ, ಹನುಮಂತ ಮಹಾರಾಜರು, ಗೌರಿಶಂಕರ ಶಿವಾಚಾರ್ಯ ಇತರರಿದ್ದರು.
ಶೇಗುಣಸಿ ಕಾಡಸಿದ್ಧೇಶ್ವರಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಯಾತ್ರೆ ಹಾಗೂ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿದರು. ಡಾ.ಮಹಾಂತಪ್ರಭು ಸ್ವಾಮೀಜಿ, ಹನುಮಂತ ಮಹಾರಾಜರು, ಗೌರಿಶಂಕರ ಶಿವಾಚಾರ್ಯ ಇತರರಿದ್ದರು.
Published on
ಅಥಣಿ ಗ್ರಾಮೀಣ: ಆಚಾರ, ವಿಚಾರ, ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬರೂ ಇಷ್ಟಲಿಂಗ ದೀಕ್ಷೆ ಪಡೆದು ಅದರಂತೆ ನಡೆದುಕೊಳ್ಳಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಕಾಡಸಿದ್ಧೇಶ್ವರಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಯಾತ್ರೆ ಹಾಗೂ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿ, ಇಲ್ಲಿಯ ಜನರಿಗೆ ಧರ್ಮವೇ ಜೀವಾಳವಾಗಿದೆ. ಧರ್ಮದ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಪರೋಪಕಾರ ಹಾಗೂ
ಸಮಾಜಕ್ಕೆ ಒಳಿತು ಮಾಡುವುದೇ ಧರ್ಮ, ಪ್ರತಿಯೊಬ್ಬರೂ ಸಹಬಾಳ್ವೆಯಿಂದ ನಡೆದು ಧರ್ಮ ಅನುಸರಿಸಬೇಕು. ಧರ್ಮದ ದಾರಿಯಲ್ಲಿ ಸಾಗುವ ಉದ್ದೇಶದಿಂದ ಧರ್ಮ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು.
ಶೇಗುಣಸಿ ವೀರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಶ್ರೀಶೈಲ ಪೀಠದ ಜಗದ್ಗುರು ನೇತೃತ್ವದಲ್ಲಿ ಧರ್ಮ ಜಾಗೃತಿ ಯಾತ್ರೆ ಆರಂಭವಾಗಿದೆ. ಜಾತಿ, ಮತ, ಪಂಥ ಹೋಗಲಾಡಿಸಿ ಜನರಲ್ಲಿರುವ ವ್ಯಸನ ತೊಡೆದು ಹಾಕಿ ಧರ್ಮದ ಕಡೆಗೆ ಕೊಂಡೊಯ್ಯವುದು ಧರ್ಮ ಜಾಗೃತಿ ಆಶಯವಾಗಿದೆ ಎಂದು ಹೇಳಿದರು.
ಶೇಗುಣಸಿ ಕಲ್ಮೇಶ್ವರ ಆಶ್ರಮದ ಹನುಮಂತ ಮಹಾರಾಜರು ಮಾತನಾಡಿ, ಮಾ.1ರಿಂದ 6ರ ವರೆಗೆ ಯಡೂರು ವೀರಭದ್ರೇಶ್ವರ ದೇವಸ್ಥಾನದ ಮಹಾಕುಂಬಾಭಿಷೇಕ, ಲಕ್ಷ ದೀಪೋತ್ಸವ ಸೇರಿ ಐವರು ಜಗದ್ಗುರುಗಳ
ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದರು.
ಮುಖಂಡರಾದ ಧರೆಪ್ಪ ಠಕ್ಕಣ್ಣವರ, ಗಜಾನನ ಮಂಗಸೂಳಿ ಮಾತನಾಡಿದರು. 200ಕ್ಕೂ ಹೆಚ್ಚು ಭಕ್ತರಿಗೆ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಪ್ರದಾನ ಮಾಡಲಾಯಿತು. ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ಮಲ್ಲಿಕಾರ್ಜುನ ಮುತ್ಯಾ, ಚೇತನಗೌಡ ಪಾಟೀಲ, ಸಂಜು ಸತ್ತಿಗೌಡರ, ಚನ್ನಬಸಯ್ಯ ಕಂಡಿ, ಶಿವಾನಂದ ಅಮ್ಮನಗಿ, ಉತ್ತಮ ಕಾಂಬಳೆ, ಶಿವಪುತ್ರ ಗಸ್ತಿ, ಬಸವರಾಜ ಸಸಾಲಟ್ಟಿ, ಅಣ್ಣಪ್ಪ ಗಲಗಲಿ, ಶಿವಲಿಂಗಯ್ಯ ಗುರುಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net