ಮಕ್ಕಳು ಉನ್ನತ ಹುದ್ದೆಗೇರಲಿ

ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಅಡುಗೆ ಸಿಬ್ಬಂದಿಗೆ ಶಾಸಕ ಡಿ.ಎಂ.ಐಹೊಳೆ ಸಮವಸö ವಿತರಿಸಿದರು. ಅಮಿತ ಜಾಧವ, ಸುರೇಶ ಮೇಖಳಿ, ಶ್ರೀಕಾಂತ ಸಂಗೋಟೆ, ಪಿ.ಆರ್.ಸಮಾಜೆ, ಶ್ರೀಮಂತ ದತ್ತವಾಡೆ ಇತರರು ಇದ್ದರು.
ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಅಡುಗೆ ಸಿಬ್ಬಂದಿಗೆ ಶಾಸಕ ಡಿ.ಎಂ.ಐಹೊಳೆ ಸಮವಸö ವಿತರಿಸಿದರು. ಅಮಿತ ಜಾಧವ, ಸುರೇಶ ಮೇಖಳಿ, ಶ್ರೀಕಾಂತ ಸಂಗೋಟೆ, ಪಿ.ಆರ್.ಸಮಾಜೆ, ಶ್ರೀಮಂತ ದತ್ತವಾಡೆ ಇತರರು ಇದ್ದರು.
Published on
ರಾಯಬಾಗ: ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರ ನೀಡಿ ಸತ್ಪಜೆಗಳನ್ನಾಗಿ ರೂಪಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ನಂದಿಕುರಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಅಡುಗೆ ಸಿಬ್ಬಂದಿಗೆ ಸಮವಸö ಹಾಗೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಕಲಿತು ಉನ್ನತ ಹುದ್ದೆ ಪಡೆಯಬೇಕು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಸಾಕಷ್ಟು ಸೌಕರ್ಯ ಕಲ್ಪಿಸಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆಯಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷ ಅಮಿತ ಜಾಧವ, ಪಿಡಿಒ ಸುರೇಶ ಮೇಖಳಿ, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀಕಾಂತ ಸಂಗೋಟೆ, ಮುಖ್ಯಶಿಕ್ಷಕ ಪಿ.ಆರ್.ಸಮಾಜೆ, ಶ್ರೀಮಂತ ದತ್ತವಾಡೆ, ಕೃಷ್ಣಾ ದತ್ತವಾಡೆ, ಶ್ರಾವಣ ಕಾಂಬಳೆ, ಸುನೀಲ ಬಿದ್ರೆ, ಅಣ್ಣಪ್ಪ ಸಂಗೋಟೆ, ರಾಮಾ ಸಂಗೋಟೆ, ದಸ್ತಗೀರ್ ಮುಲ್ತಾನಿ, ಎಸ್.ಬಿ.ತಾವಶಿ, ಡಿ.ಡಿ.ನದಾಫ, ಎ.ಎಸ್.ಧನಗರ, ವಿ.ಡಿ.ಪಾಟೀಲ, ಎಸ್.ಬಿ.ನಾಯಿಕ, ಎಸ್.ಎಸ್.ಪೋಳ, ಎಸ್.ಆರ್.ನಾಯಿಕ, ಜ್ಞಾನೇಶ್ವರ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net