ಗ್ರಾಮಸ್ಥ ಭೀಮಪ್ಪ ಮುಶೆನ್ನವರ ಮಾತನಾಡಿ, ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾಗುತ್ತಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಮನವಿ ಸಲ್ಲಿಸಿದರು. ಉಪತಹಸೀಲ್ದಾರ್ ಪ್ರಕಾಶ ಕೋರಿ ಮನವಿ ಸ್ವೀಕರಿಸಿ, ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಚನ್ನಬಸವೇಗೌಡ ಪಾಟೀಲ, ಭೀಮಪ್ಪ ಶೀಗಿಹಳ್ಳಿ, ಮಲ್ಲಪ್ಪ ಹುಂಚನ್ನವರ, ವಿಠ್ಠಲ ಹಳೇಗೌಡ್ರ, ಕೀರಪ್ಪ ಹುಂಚನ್ನವರ, ನಿಂಗಪ್ಪ ಕುರುಬಗಟ್ಟಿ, ಸತೀಶ ಲಂಗೋಟಿ, ಮಂಜುನಾಥ ಸರದಾರ, ಬಸಯ್ಯ ಕೇರಿಮಠ, ಸಿದ್ದಪ್ಪ ಶೀಗಿಹಳ್ಳಿ ಇತರರಿದ್ದರು.