ಬೆಳಗಾವಿ: ಅಶೋಕ ನಗರದ ಅಂಡರ್ ಪಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಝಳಪಿಸುತ್ತ ತಿರುಗಾಡುತ್ತಿದ್ದ ಸುಭಾಷ ನಗರ ನಿವಾಸಿ ಫಾರೂಖ್ ರೆಹಮಾನ್ ಚಜ್ಜು (35)ನನ್ನು ಬಂಧಿಸಿರುವ ಮಾಳಮಾರುತಿ ಪೊಲೀಸರು, ಆಯುಧ ವಶಪಡಿಸಿಕೊಂಡಿದ್ದಾರೆ.
ಪಾಟೀಲ ಮಾಳ ರಸ್ತೆ ಬದಿಗೆ ಸಾರ್ವಜನಿಕ ಸ್ಥಳದಲ್ಲಿ ಮಾದಕ ಪದಾರ್ಥ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಶಾಸ್ತ್ರಿ ನಗರದ ನಿವಾಸಿ ಉತ್ಕರ್ಷ ಸುನೀಲ ವರ್ಮಾ (24) ವಿರುದ್ಧ ಖಡೇಬಜಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಂಜರಗಲ್ಲಿಯಲ್ಲಿ ಮಟ್ಕಾ ಆಡುತ್ತಿದ್ದ ವೇಳೆ ದಾಳಿ ಮಾಡಿದ ಮಾರ್ಕೆಟ್ ಠಾಣೆ ಪೊಲೀಸರು ರಿಯಾಜ್ ಘೀವಾಲೆ (46), ಕಂಗ್ರಾಳಗಲ್ಲಿಯ ಅಶೋಕ ಜಾಧವ (58) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.