ಮಲ್ಲಮ್ಮಳ ಬದುಕು ಅನುಕರಣೀಯ

ಕಟಗೇರಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಕಂಬಿ ಐದೇಶಿ ನಿಮಿತ್ತ ಹಮ್ಮಿಕೊಂಡ ಹೇಮರಡ್ಡಿ ಮಲ್ಲಮ್ಮಳ ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಅಶ್ವಿನಿ ಜಿಯೋಜಿ ಅವರಿಗೆ ಹೇಮರಡ್ಡಿ ಮಲ್ಲಮ್ಮಳ ತೊಟ್ಟಿಲು ವಿತರಿಸಲಾಯಿತು. ಶ್ರೀದೇವಿ ಮಾತಾಜಿ, ಪಿ.ಎಲ್.ಪೂಜಾರಿ, ಗುರುಶಾಂತ ಕರಡಿಮಠ ಇತರರಿದ್ದರು.

Published on
ಅಥಣಿ ಗ್ರಾಮೀಣ: ಹೇಮರಡ್ಡಿ ಮಲ್ಲಮ್ಮ ದೈವಭಕ್ತಿ, ಕಾಯಕ ನಿಷ್ಠೆ, ದಾನ ಧರ್ಮದಿಂದ ಲೋಕ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹುಲ್ಯಾಳದ ಶ್ರೀದೇವಿ ಮಾತಾಜಿ ಹೇಳಿದರು.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಕಂಬಿ ಐದೇಶಿ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮಳ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿ, ಶ್ರೀಶೈಲ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡ ಮಲ್ಲಮ್ಮಳ ಬದುಕು ಅನುಕರಣೀಯ. ಯುವ ಪೀಳಿಗೆ ಮಲ್ಲಮ್ಮಳ ಆದರ್ಶ ಪಾಲಿಸಬೇಕು ಎಂದರು.
ಪಿ.ಎಲ್.ಪೂಜಾರಿ ಮಾತನಾಡಿ, ಗ್ರಾಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ನೈತಿಕ ಮೌಲ್ಯಗಳನ್ನು ಬಲಪಡಿಸಿಕೊಳ್ಳಬಹುದು ಎಂದರು.
ಹಿರಿಯರಾದ ಬಸಪ್ಪ ಮಗದುಮ್ಮ, ಗುರುಪಾದ ಸವದಿ, ಶಂಕರ ಸೊನ್ನದ, ಅಶೋಕ ಮಗದುಮ್ಮ, ಗುರುಶಾಂತ ಕರಡಿಮಠ, ಶಿವಲಿಂಗ ಪೂಜಾರಿ, ಅಶ್ವಿನಿ ಜಿಯೋಜಿ, ಶಿದರಾಯ ಟೋಪಣ್ಣವರ, ಬಸಪ್ಪ ಮದಲಮಟ್ಟಿ, ರಾಜು ಪೂಜಾರಿ, ಚನ್ನಪ್ಪ ಭದ್ರಣ್ಣವರ, ಮಹಾಂತಯ್ಯ ಮಠಪತಿ, ಪರಪ್ಪ ಪೂಜಾರಿ, ಮಲ್ಲಯ್ಯ ಮಠಪತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net