ಬೇಕರಿ ಎಕ್ಸ್‌ಪೋ ಸದುಪಯೋಗಪಡಿಸಿಕೊಳ್ಳಿ

ನಗರದ ಕೆಎಲ್‌ಇ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಬೇಕರಿ ಎಕ್ಸ್‌ಪೋದಲ್ಲಿ ಡಾ.ಸಂದೀಪ ಶ್ರೀವಾಸ್ತವ, ಡಾ.ನಂದಕುಮಾರ ಜಿ., ಡಾ.ವಿ.ಎಂ.ಪಟ್ಟಣಶೆಟ್ಟಿ ಇತರರಿದ್ದರು.
ನಗರದ ಕೆಎಲ್‌ಇ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಬೇಕರಿ ಎಕ್ಸ್‌ಪೋದಲ್ಲಿ ಡಾ.ಸಂದೀಪ ಶ್ರೀವಾಸ್ತವ, ಡಾ.ನಂದಕುಮಾರ ಜಿ., ಡಾ.ವಿ.ಎಂ.ಪಟ್ಟಣಶೆಟ್ಟಿ ಇತರರಿದ್ದರು.
Published on
ಬೆಳಗಾವಿ: ಸೃಜನಶೀಲತೆ, ಕೌಶಲ ಮತ್ತು ಜಾಗತಿಕ ಬೇಕರಿ ಪ್ರವೃತ್ತಿ ಪರಿಚಯಿಸುವಲ್ಲಿ ಬೇಕರಿ ಎಕ್ಸ್‌ಪೋ ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೆಎಲ್‌ಇ ಕಾಹೆರ್ ಕುಲಪತಿ ಡಾ.ಸಂದೀಪ ಶ್ರೀವಾಸ್ತವ ಹೇಳಿದರು.
ನಗರದ ಕೆಎಲ್‌ಇ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ವತಿಯಿಂದ ಈಚೆಗೆ ಆಯೋಜಿಸಿದ್ದ ಬೇಕರಿ ಎಕ್ಸ್‌ಪೋ-2026 ದಿ ಗ್ಲೇಶಿಯರ್ ಸೀಸನ್-6 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಬಹು ಬೇಡಿಕೆಯಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಡಾ.ನಂದಕುಮಾರ ಜಿ. ಮಾತನಾಡಿ, ಪ್ರಾಯೋಗಿಕ ಕಲಿಕೆ ಮತ್ತು ಅಡುಗೆ ನಾವೀನ್ಯತೆ ಹೆಚ್ಚಿಸಲು ಸಂಸ್ಥೆ ಇಂತಹ ಕಾರ್ಯಕ್ರಮ ಆಯೋಜಿಸುತ್ತದೆ ಎಂದರು.
ಕಾಹೆರ್ ರಿಜಿಸ್ಟ್ರಾರ್ ಡಾ.ವಿ.ಎಂ.ಪಟ್ಟಣಶೆಟ್ಟಿ, ಜಪಾನ್ ಖ್ಯಾತ ಶೆಫ್ ಶಿಗೆಟೋ ಹಯಾಶಿ ಇತರರಿದ್ದರು.
ಗಮನ ಸೆಳೆದ ಬನ್ಸ್: ಜಪಾನಿನ ಖ್ಯಾತ ಶೆಫ್ ಶಿಗೆಟೋ ಹಯಾಶಿ ವಿದ್ಯಾರ್ಥಿಗಳಿಗೆ ಜಪನೀಸ್ ಬೇಕರಿ ಉತ್ಪನ್ನಗಳ ತರಬೇತಿ ನೀಡಿದರು. ಎಕ್ಸ್‌ಪೋದಲ್ಲಿ 100ಕ್ಕೂ ಅಧಿಕ ಕೇಕ್ ಹಾಗೂ ಬ್ರೆಡ್ ವೈವಿಧ್ಯಗಳು ಪ್ರದರ್ಶನಗೊಂಡಿದ್ದು, ಮಿಲ್ಕ್ ಬ್ರೆಡ್, ಮಾರ್ಬಲ್ ಬ್ರೆಡ್, ಚಾಕೊಲೇಟ್ ಬ್ರೆಡ್, ರಸ್ಕ್ ಮತ್ತು ವಿವಿಧ ಫಿಲ್ಡ್ ಬನ್ಸ್ ಗಮನ ಸೆಳೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net