ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಿ

ಪ್ರತಿಭಟನೆ
ಪ್ರತಿಭಟನೆ
Published on
ಬೆಳಗಾವಿ: ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟಿಸಲಾಯಿತು.
ಸೇವಾ ಭದ್ರತೆ ಒದಗಿಸಬೇಕು. ತಿಂಗಳಿಗೆ 36 ಸಾವಿರ ರೂ. ಕನಿಷ್ಠ ವೇತನ ನೀಡಬೇಕು. ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೊಂದು ರಜೆ ನೀಡಬೇಕು. ಕೆಲಸದ ಸಮಯ ನಿಗದಿಯಾಗಬೇಕು. ಅಪಘಾತವಾದಾಗ ಇಲಾಖೆಯಿಂದ ಚಿಕಿತ್ಸೆ ಹಾಗೂ ಪರಿಹಾರ ಒದಗಿಸಬೇಕು.
ಗುತ್ತಿಗೆದಾರರ ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐಡಿ ಕಾರ್ಡ್, ಸರ್ವಿಸ್ ಸರ್ಟಿಫಿಕೇಟ್, ಇಎಸ್‌ಐ ಮತ್ತು ಪಿಎ್ ಹಣ ತುಂಬಿದ ರಸೀದಿ ನೀಡಬೇಕು ಎಂದು ಆಗ್ರಹಿಸಿದರು. ಭೀಮಶೆಟ್ಟಿ ಯಂಪಳ್ಳಿ, ಮರಡಿ ಜಂಬಯ್ಯ ನಾಯಕ, ಕೆ. ಹನುಮೇಗೌಡ, ಪ್ರದೀಪ ದಳವಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net