ಕೃಷಿ ವೆಚ್ಚ ತಗ್ಗಿಸುವ ಯಂತ್ರೋಪಕರಣ

ಖಾನಾಪುರದಲ್ಲಿ ಕೃಷಿ ಇಲಾಖೆ ಹಾಗೂ ಸಣ್ಣ ನೀರಾವರಿ ಯೋಜನೆಯಡಿ ಶಾಸಕ ವಿಠ್ಠಲ ಹಲಗೇಕರ ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಿದರು. ಸದಾನಂದ ಪಾಟೀಲ, ವಿಜಯ ಕಾಮತ, ನಾರಾಯಣ ಗೋಧಿ ಇತರರಿದ್ದರು.
ಖಾನಾಪುರದಲ್ಲಿ ಕೃಷಿ ಇಲಾಖೆ ಹಾಗೂ ಸಣ್ಣ ನೀರಾವರಿ ಯೋಜನೆಯಡಿ ಶಾಸಕ ವಿಠ್ಠಲ ಹಲಗೇಕರ ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಿದರು. ಸದಾನಂದ ಪಾಟೀಲ, ವಿಜಯ ಕಾಮತ, ನಾರಾಯಣ ಗೋಧಿ ಇತರರಿದ್ದರು.
Published on

ಆಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ರೈತರಿಗೆ ಸಮಯ ಮತ್ತು ಶ್ರಮ ಉಳಿತಾಯವಾಗುವ ಜತೆಗೆ ಕೃಷಿ ಚಟುವಟಿಕೆಗಳ ವೆಚ್ಚ ಕಡಿಗೊಳಿಸಲು ಸಹಾಯಕವಾಗುತ್ತದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಪಟ್ಟಣದಲ್ಲಿ ಕೃಷಿ ಇಲಾಖೆ ಕೃಷಿ ಯಾಂತ್ರೀಕರಣ ಹಾಗೂ ಸಣ್ಣ ನೀರಾವರಿ ಯೋಜನೆಯಡಿ ತಾಲೂಕಿನ 20ಕ್ಕೂ ಹೆಚ್ಚು ರೈತರಿಗೆ ಬುಧವಾರ ವಿವಿಧ ಕೃಷಿ ಯಂತ್ರೋಪಕರಣ ವಿತರಿಸಿ ಮಾತನಾಡಿದರು.
ಕೃಷಿ ಸಹಾಯಕ ನಿರ್ದೇಶಕ ಡಿ.ಬಿ.ಚೌಹಾಣ ಮಾತನಾಡಿ, ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಸಾಮಾನ್ಯ ವರ್ಗ ಶೇ.50 ಹಾಗೂ ಹಿಂದುಳಿದ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆ. ಸ್ಪ್ರಿಂಕ್ಲರ್ ಯಂತ್ರಕ್ಕೆ ಎಲ್ಲ ವರ್ಗದ ಲಾನುಭವಿಗಳಿಗೆ ಶೇ.90 ಸಹಾಯಧನ ಲಭ್ಯವಿದೆ ಎಂದು ತಿಳಿಸಿದರು.
ಸದಾನಂದ ಪಾಟೀಲ, ವಿಜಯ ಕಾಮತ, ನಾರಾಯಣ ಗೋಧಿ, ರಾಹುಲ ಅಳವಣಿ, ದೀಪಾ ವಡೇರ, ಬಸಯ್ಯ ಚಿಕ್ಕಮಠ, ಮಂಜುನಾಥ ಕೆಂಚನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net