ಮಹಾತ್ಮರ ನುಡಿ ಆಲಿಸಿರಿ

ಬುರ್ಲಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು. ಶಿವಾಚಾರ್ಯ ಸ್ವಾಮೀಜಿ, ಸದಾಶಿವಯ್ಯ ಶಾಸ್ತ್ರೀ ಇದ್ದರು.
ಬುರ್ಲಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು. ಶಿವಾಚಾರ್ಯ ಸ್ವಾಮೀಜಿ, ಸದಾಶಿವಯ್ಯ ಶಾಸ್ತ್ರೀ ಇದ್ದರು.
Published on

ಅಥಣಿ ಗ್ರಾಮೀಣ: ಶ್ರಾವಣ ಮಾಸದಲ್ಲಿ ದೇವರ ಆರಾಧನೆ, ಧರ್ಮಾಚರಣೆ ಮತ್ತು ಸತ್ಕಾರ್ಯಗಳ ಮೂಲಕ ಜೀವನ ಸಾರ್ಥಕಗೊಳಿಸಬೇಕು ಎಂದು ವಿಜಯಪುರ ಸಿದ್ಧೇಶ್ವರ ಆಶ್ರಮದ ಸಂಗಮೇಶ್ವರ ಸ್ವಾಮೀಜಿ ನುಡಿದರು.

ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ಖೋತ ತೋಟದ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಲಶಾರೋಹಣ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಹಣ, ಆಸ್ತಿ, ಅಂತಸ್ತಿಗಾಗಿ ಬಡಿದಾಡುವ ಬದಲು, ಕಾಯಕ ಮಾಡುತ್ತ ಮಹಾತ್ಮರ ಹಾಗೂ ಶರಣರ ನುಡಿ ಆಲಿಸಬೇಕು ಎಂದರು.
ಜಮಖAಡಿ ಕಲ್ಯಾಣ ಮಂಟಪದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಇದಕ್ಕೂ ಪೂರ್ವ ಶ್ರೀಗಳು ಬಸವೇಶ್ವರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ದೇವಸ್ಥಾನಕ್ಕೆ ಕಲಶಾರೋಹಣ ನೆರವೇರಿಸಿದರು. ಮಧ್ಯಾಹ್ನ ಅನ್ನಪ್ರಸಾದ
ವ್ಯವಸ್ಥೆ ಏರ್ಪಡಿಸಲಾಗಿತ್ತು.
ಸದಾಶಿವಯ್ಯ ಶಾಸ್ತ್ರೀ, ಮಹಾಂತಯ್ಯ ಹಿರೇಮಠ, ಶ್ರವಣ ಶಾಸ್ತ್ರೀ, ಲಕ್ಷ್ಮಣ ಖೋತ, ಬಸಲಿಂಗ ಅಡಹಳ್ಳಿ, ತಾಯಪ್ಪ ಖೋತ, ಕಾಡಪ್ಪ ಕಾಳಾಪಾಟೀಲ, ರಾವಸಾಬ ಖೋತ, ರಾಜು ಪೂಜಾರಿ, ರಾವಸಾಬ ಖೋತ, ಶಿವಾಜಿ ಖೋತ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net