ಉಳ್ಳಾಗಡ್ಡಿ-ಖಾನಾಪುರ ಸಮೀಪದ ಯಮಕನಮರಡಿ ಜೈನ ಬಸದಿ ಬಳಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಸಿದ್ದಬಸವ ದೇವರು, ಗುರುಸಿದ್ಧೇಶ್ವರ ಸ್ವಾಮೀಜಿ ಇತರರಿದ್ದರು.
Published on:
Copied
Follow Us
ಉಳ್ಳಾಗಡ್ಡಿ-ಖಾನಾಪುರ: ಕನ್ನಡ ಭಾಷೆಗೆ ತನ್ನದೇಯಾದ ಭೌತಿಕ ನೆಲೆಯಿದ್ದು, ನಾಡಿನ ಸಂಸ್ಕೃತಿ, ನೆಲ, ಜಲ ಸಂರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಆ ನಿಟ್ಟಿನಲ್ಲಿ ನಾಡಿನ ಉಳಿವಿಗಾಗಿ ಶ್ರಮಿಸೋಣ ಎಂದು ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಹೇಳಿದರು.
ಸಮೀಪದ ಯಮಕನಮರಡಿಯಲ್ಲಿ ಕನ್ನಡ ಬಳಗ ಮತ್ತು ಕನ್ನಡ ಸಂಘಟನೆಗಳ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಂಗೀತ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಯಮಕನಮರಡಿ ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿದ್ದು, ಯಮ್ಮಕ್ಕನಮರಡಿ ಸಂಸ್ಥಾನದ ರಾಜ್ಯಮಾತೆ ಯಮ್ಮಕ್ಕರಾಣಿ ಸರದೇಸಾಯಿಯವರ ಪರಿಚಯ ರಾಜ್ಯಕ್ಕೆ ಆಗಬೇಕು. ಸಚಿವ ಸತೀಶ ಜಾರಕಿಹೊಳಿ ಯಮ್ಮಕ್ಕ ರಾಣಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಕ್ರಮ ವಹಿಸಬೇಕು ಎಂದರು.
ಹತ್ತರಗಿಯ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಸಂಗೀತದಿಂದ ಜೀವನದಲ್ಲಿ ನೆಮ್ಮದಿ ಸಾಧ್ಯ. ಆದ್ದರಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಯುವಧುರೀಣ ಕಿರಣಸಿಂಗ್ ರಜಪೂತ, ವೀರಣ್ಣ ಬಿಸಿರೊಟ್ಟಿ, ಮೌಲಾನಾ ಹಾರೂನ್, ಹುಕ್ಕೇರಿ ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಶಿವಕುಮಾರ ಪೋತದಾರ, ಎಸ್.ಜಿ. ಹುನ್ನರಗಿ ಇತರರಿದ್ದರು.