ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಲಿ

ನಂದಗಾಂವ ಗ್ರಾಮದಲ್ಲಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಥೋತ್ಸವಕ್ಕೆ ಮಹೇಶಾನಂದ ಸ್ವಾಮೀಜಿ ಚಾಲನೆ ನೀಡಿದರು. ಬಸಪ್ಪ ಗುಮಟಿ, ಮುತ್ತಪ್ಪ ಸಂತಿ, ಅಣ್ಣಪ್ಪ ಕಾತ್ರಾಳ, ಶ್ರೀಕಾಂತ ನಂದೇಶ್ವರ, ಮಂಗಲ ಗುಮಟಿ, ರಾಽಕಾ ಮಠಪತಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಂಚಿನಾಳದ ಮಹೇಶಾನಂದ ಸ್ವಾಮೀಜಿ ಅನಿಸಿಕೆ
  • ರಥೋತ್ಸವಕ್ಕೆ ಚಾಲನೆ
ಅಥಣಿ ಗ್ರಾಮೀಣ: ಮಕ್ಕಳಿಗೆ ಪ್ರಾಮಾಣಿಕತೆ, ಸೇವೆ, ಗುರುಹಿರಿಯರ ಬಗ್ಗೆ ಗೌರವ ಕಲಿಸಿ ಸತ್ಪ್ರಜೆಯನ್ನಾಗಿ ರೂಪಿಸಬೇಕು ಎಂದು ಹಂಚಿನಾಳದ ಮಹೇಶಾನಂದ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ದೇಶೀಯ ಸೊಗಡು ಅಳವಡಿಸಿಕೊಳ್ಳಬೇಕು. ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲು ಗುರು ಎಂಬಂತೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿ ಪಾತ್ರ ಅಮೋಘವಾದುದು ಎಂದರು.
ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಗುಮಟಿ ಮಾತನಾಡಿ, ಬಬಲಾದಿ ಸದಾಶಿವ ಅಜ್ಜನವರದು ಭವ್ಯ ಪರಂಪರೆ ಇದೆ. ಅಂತಹ ಸತ್ಪುರುಷರ ಜಾತ್ರೆ ವೈಭವದಿಂದ ನಡೆದಿದ್ದು, ನಮಗೆಲ್ಲ ಸಂತೋಷ ತಂದಿದೆ ಎಂದರು. ಮುತ್ತಪ್ಪ ಸಂತಿ, ಅಣ್ಣಪ್ಪ ಕಾತ್ರಾಳ, ಶ್ರೀಕಾಂತ ನಂದೇಶ್ವರ, ಮಂಗಲ ಗುಮಟಿ, ರಾಧಿಕಾ ಮಠಪತಿ, ಪ್ರಕಾಶ ಮಾಳಿ, ಸಿದರಾಯ ಗುಮಟಿ, ಮಲ್ಲಪ್ಪ ನಿಲಜಗಿ, ಸಿದ್ದಪ್ಪ ಇಚೇರಿ, ಸಿದ್ದಲಿಂಗ ಗುಮಟಿ, ಅಪ್ಪಾಸಾಬ ಗೊಂದಳಿ, ಬಾಳಪ್ಪ ಹೊಸಟ್ಟಿ, ಸುರೇಶ ನಿಲಜಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net