ಸಹಕಾರ ಸಂಘಗಳ ಬೆಳವಣಿಗೆಗೆ ಕೈಜೋಡಿಸಲಿ

ರಾಯಬಾಗದಲ್ಲಿ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ವಿವೇಕರಾವ ಪಾಟೀಲ ಉದ್ಘಾಟಿಸಿದರು. ಲಕ್ಷ್ಮಿಕಾಂತ ದೇಸಾಯಿ, ಬಸಗೌಡ ಪಾಟೀಲ ಇತರರಿದ್ದರು.
ರಾಯಬಾಗದಲ್ಲಿ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ವಿವೇಕರಾವ ಪಾಟೀಲ ಉದ್ಘಾಟಿಸಿದರು. ಲಕ್ಷ್ಮಿಕಾಂತ ದೇಸಾಯಿ, ಬಸಗೌಡ ಪಾಟೀಲ ಇತರರಿದ್ದರು.
Published on
ರಾಯಬಾಗ: ಸಹಕಾರ ಸಂಘಗಳು ಆರ್ಥಿಕ ಮತ್ತು ಸದೃಢವಾಗಿ ಬೆಳೆಯಲು ಎಲ್ಲರೂ ಕೈಜೋಡಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಹೇಳಿದರು.
ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ತಾಲೂಕು ಸಹಕಾರ ಮತ್ತು ಸೌಹಾರ್ದ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ತಾಲೂಕು ಸಹಕಾರ ಅಭಿವೃದ್ಧಿ ಅಽಕಾರಿ ಎಸ್.ಎಸ್.ಕರಬಸನವರ ಮಾತನಾಡಿ, ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲ ಸ್ಥಾಪಿಸಿದ ಸಹಕಾರ ಸಂಘ ದೇಶಾದ್ಯಂತ ಹೆಮ್ಮರವಾಗಿ ಬೆಳೆದಿದೆ. ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಪ್ರತಿವರ್ಷ ನ.೧೪ ರಿಂದ ೨೦ರ ವರೆಗೆ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ. ಕಾರವಾರ ಮತ್ತು ಮಂಗಳೂರಿನ ಸಹಕಾರ ಸಂಘಗಳು ಮಾದರಿಯಾಗಿವೆ ಎಂದರು.  
ಚಿಕ್ಕೋಡಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಾಹುಬಲಿ ಹಂಜೆ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಲಕ್ಷ್ಮಿಕಾಂತ ದೇಸಾಯಿ, ಅಧ್ಯಕ್ಷ ಬಸಗೌಡ ಪಾಟೀಲ, ಕಂಕಣವಾಡಿ ಪಪಂ ಅಧ್ಯಕ್ಷ ಪ್ರಕಾಶ ಹುಕ್ಕೇರಿ, ಹಾರೂಗೇರಿ ಜನತಾ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ, ಬಿ.ಎಸ್.ಸುಲ್ತಾನಪೂರ, ಈರನಗೌಡ ಪಾಟೀಲ, ಬಸಪ್ಪ ಕೋಣೆ, ಎಸ್.ಬಿ.ಪಾಟೀಲ, ಸಿದ್ದಣ್ಣ ನಾಗನೂರ, ಎಸ್.ಎಸ್.ಅಮರಶೆಟ್ಟಿ ಇತರರಿದ್ದರು. ಹಾಲಪ್ಪ ಜಗ್ಗಿನವರ ಸ್ವಾಗತಿಸಿದರು. ಶೈಲಜಾ ಕೊಕ್ಕರೆ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net