ಕಲಿಕಾ ಗುಣಮಟ್ಟ ವೃದ್ಧಿಸಲಿ

ಸಂಕೇಶ್ವರ ಸಮೀಪದ ನಿಡಸೋಸಿ ಎಸ್‌ಜೆಡಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮುಖ್ಯಶಿಕ್ಷಕರ ಸಭೆಯಲ್ಲಿ ಸೀತಾರಾಮು ಆರ್.ಎಸ್. ಮಾತನಾಡಿದರು. ಆರ್ೀ ಬಿರಾದಾರ, ಸಂಜೀವ ಹುಲ್ಲೋಳಿ, ಹರಿದಾಸ ಖಾಡೆ, ಸುನೀಲ ಗಲಗಲಿ,  ಎಂ.ಟಿ.ಜನಗೌಡರ ಇತರರಿದ್ದರು.
ಸಂಕೇಶ್ವರ ಸಮೀಪದ ನಿಡಸೋಸಿ ಎಸ್‌ಜೆಡಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮುಖ್ಯಶಿಕ್ಷಕರ ಸಭೆಯಲ್ಲಿ ಸೀತಾರಾಮು ಆರ್.ಎಸ್. ಮಾತನಾಡಿದರು. ಆರ್ೀ ಬಿರಾದಾರ, ಸಂಜೀವ ಹುಲ್ಲೋಳಿ, ಹರಿದಾಸ ಖಾಡೆ, ಸುನೀಲ ಗಲಗಲಿ, ಎಂ.ಟಿ.ಜನಗೌಡರ ಇತರರಿದ್ದರು.
Published on
ಸಂಕೇಶ್ವರ: ಎಸ್‌ಎಲ್‌ಎಲ್‌ಸಿ ಲಿತಾಂಶ ಸುಧಾರಣೆಗೆ ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಡಿಡಿಪಿಐ ಸೀತಾರಾಮು ಆರ್.ಎಸ್.ಹೇಳಿದರು.
ಸಮೀಪದ ನಿಡಸೋಸಿ ಎಸ್‌ಜೆಡಿ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ತಯಾರಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿ, ಪ್ರೌಢ ಶಿಕ್ಷಣದ ಅಂತಿಮ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿಯಲ್ಲಿ ಆತ್ಮವಿಶ್ವಾಸದ ಜತೆ ಕಲಿಕಾ ಗುಣಮಟ್ಟ ವೃದ್ಧಿಸುವ ಮೂಲಕ ಉತ್ತಮ ಲಿತಾಂಶದತ್ತ ಶಿಕ್ಷಕರು ಗಮನಹರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣ ಅಧಿಕಾರಿ ಪ್ರಭಾವತಿ ಪಾಟೀಲ ಮಾತನಾಡಿ, ಕಳೆದ ವರ್ಷ ಕಡಿಮೆ ಲಿತಾಂಶ ದಾಖಲಿಸಿರುವ ಶಾಲೆಗಳು ವಿಶೇಷ ಯೋಜನೆಗಳ ಲಿತಾಂಶದಲ್ಲಿ ಸುಧಾರಣೆ ಮಾಡಬೇಕು ಎಂದರು.
ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಹರಿದಾಸ ಖಾಡೆ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ ಆರ್ೀ ಬಿರಾದಾರ ಮಾತನಾಡಿದರು. ಹುಕ್ಕೇರಿಯ 86 ಹಾಗೂ ಚಿಕ್ಕೋಡಿಯ 75 ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಭಾಗವಹಿಸಿದ್ದರು.
ಡಯಟ್ ಪ್ರಾಂಶುಪಾಲ ಸಂಜೀವ ಹುಲ್ಲೋಳಿ, ಎಸ್‌ಜೆಡಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುನೀಲ ಗಲಗಲಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಟಿ.ಜನಗೌಡರ, ಸವಿತಾ ಹಲಕಿ, ಎಸ್.ಐ. ಅಮ್ಮಿನಭಾವಿ, ಸುನೀಲ ಖೋತ, ಭರತ ಪಾರ್ಥನಳ್ಳಿ, ಹುಕ್ಕೇರಿ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಪ್ರಭು ಬಿರಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net