ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಬೇಸಿಗೆ ಕ್ರೀಡಾ ತರಬೇತಿ ಶಿಬಿರವನ್ನು ಗಜರಾಜ ರಣತೂರ ಉದ್ಘಾಟಿಸಿದರು. ಜೆ.ಬಿ.ಮೇಟಿ, ಸತೀಶ ಪಾಟೀಲ, ಪಿ.ಕೆ.ಪಾಟೀಲ, ಐ.ಎಸ್.ಸೂಳಿಭಾವಿ ಇತರರಿದ್ದರು.
ಕಟಕೋಳ: ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು ಪ್ರತಿಯೊಬ್ಬರೂ ಆಟಗಳಲ್ಲಿ ಭಾಗವಹಿಸುವ ಮೂಲಕ ಶಿಸ್ತು, ಏಕಾಗ್ರತೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಕೆಎಂಎ್ ಹಾಲು ಒಕ್ಕೂಟದ ಜಂಟಿ ನಿರ್ದೇಶಕ ಗಜರಾಜ ರಣತೂರ ಹೇಳಿದರು.
ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಬಿರದಲ್ಲಿ ವಿದ್ಯಾರ್ಥಿಗಳು ಸಮಯಪಾಲನೆ, ಧನಾತ್ಮಕ ಚಿಂತನೆಗಳ ಜತೆಗೆ ಸಮಸ್ಯೆ ನಿವಾರಿಸುವ ಗುಣ ಕಲಿತುಕೊಳ್ಳಬೇಕು ಎಂದರು.
ಸಭೆಯಲ್ಲಿ ವ್ಯವಸ್ಥಾಪಕ ಜೆ.ಬಿ.ಮೇಟಿ, ಕಾಲೇಜು ಪ್ರಾಚಾರ್ಯ ಸತೀಶ ಪಾಟೀಲ, ಸಿಬಿಎಸ್‌ಇ ಪ್ರಾಚಾರ್ಯ ಪಿ.ಕೆ.ಪಾಟೀಲ, ಕನ್ನಡ ಮಾಧ್ಯಮ ಪ್ರಾಚಾರ್ಯ ಐ.ಎಸ್.ಸೂಳಿಭಾವಿ ಇತರರಿದ್ದರು.