ಸಾವಯವ ಕೃಷಿ ಅಳವಡಿಸಿಕೊಳ್ಳಲಿ

ಬೋರಗಾಂವ ಪಟ್ಟಣದಲ್ಲಿ ದಿ.ರಾವಸಾಹೇಬ ಪಾಟೀಲ ಜನ್ಮದಿನ ಆಚರಿಸಲಾಯಿತು. ಯುವ ನಾಯಕ ಉತ್ತಮ ಪಾಟೀಲ,  ರಾವಸಾಹೇಬ ಪಾಟೀಲ, ಅಭಿನಂದನ ಪಾಟೀಲ, ಬಾಲಚಂದ್ರ ಪಾಟೀಲ, ಅಂಕುಶ ಪಾಟೀಲ ಇತರರಿದ್ದರು.
ಬೋರಗಾಂವ ಪಟ್ಟಣದಲ್ಲಿ ದಿ.ರಾವಸಾಹೇಬ ಪಾಟೀಲ ಜನ್ಮದಿನ ಆಚರಿಸಲಾಯಿತು. ಯುವ ನಾಯಕ ಉತ್ತಮ ಪಾಟೀಲ, ರಾವಸಾಹೇಬ ಪಾಟೀಲ, ಅಭಿನಂದನ ಪಾಟೀಲ, ಬಾಲಚಂದ್ರ ಪಾಟೀಲ, ಅಂಕುಶ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಕುಶ ಪಾಟೀಲ ಹೇಳಿಕೆ
  • ದಿ.ರಾವಸಾಹೇಬ ಪಾಟೀಲ ಜನ್ಮ ದಿನಾಚರಣೆ
ಬೋರಗಾಂವ: ಬೀಜ, ರಸಗೊಬ್ಬರ ಮತ್ತು ಔಷಧಗಳನ್ನು ಸರಿ ಪ್ರಮಾಣದಲ್ಲಿ ಬಳಸಿ, ಆಧುನಿಕ ತಂತ್ರಜ್ಞಾನದೊಂದಿಗೆ ಕೃಷಿ ಮಾಡಿದಲ್ಲಿ ಲಾಭ ದೊರೆಯುತ್ತದೆ ಎಂದು ಕೃಷಿ ತಜ್ಞ ಅಂಕುಶ ಪಾಟೀಲ ಹೇಳಿದರು.
ಇಲ್ಲಿನ ಅರಿಹಂತ ಉದ್ಯೋಗ ಸಮೂಹ, ದಕ್ಷಿಣ ಭಾರತ ಜೈನಸಭೆ ಪದವೀಧರರ ಸಂಘ ಮತ್ತು ಭಗವಾನ ವೃಷಭನಾಥ ಕೃಷಿ ಸಮಿತಿ ಆಶ್ರಯದಲ್ಲಿ ದಿ.ರಾವಸಾಹೇಬ ಪಾಟೀಲ ೮೨ನೇ ಜನ್ಮ ದಿನಾಚರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರೈತ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಾವಯವ ಗೊಬ್ಬರ ಬಳಸಿ ಬೇಸಾಯ ಮಾಡಿದಲ್ಲಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಸಾಧ್ಯ. ಕೃಷಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳುವುದರಿಂದ ನೀರು ಉಳಿತಾಯವಾಗುತ್ತದೆ ಮತ್ತು ಉತ್ಪಾದನೆ ಹೆಚ್ಚಾಗುತ್ತದೆ. ಬೆಳೆ ಪದ್ಧತಿ ಬದಲಾವಣೆ ಮತ್ತು ಮಿಶ್ರ ಬೆಳೆ ವಿಧಾನ ಅಳವಡಿಸಿಕೊಳ್ಳುವುದರಿಂದ ಆದಾಯದ ಮೂಲಗಳು ಹೆಚ್ಚುತ್ತವೆ. ರೈತರು ಮಾರುಕಟ್ಟೆಯ ಅಧ್ಯಯನ ಮಾಡಿ ಸರಿಯಾದ ಸಮಯದಲ್ಲಿ ಬೆಳೆಗಳನ್ನು ಮಾರಾಟ ಮಾಡಿದರೆ ಉತ್ತಮ ಬೆಲೆ ಪಡೆಯಬಹುದು ಎಂದು ಹೇಳಿದರು.
ಮಾಜಿ ಸಚಿವ ವೀರಕುಮಾರ ಪಾಟೀಲ, ದಕ್ಷಿಣ ಭಾರತ ಜೈನಸಭಾ ಅಧ್ಯಕ್ಷ ಬಾಲಚಂದ್ರ ಪಾಟೀಲ, ಚೇರ್ಮನ್‌ಸಂಜಯ ಶೇಠ, ವೈಸ್ ಚೇರ್ಮನ್ ಅಭಿನಂದನ ಪಾಟೀಲ, ರಾವಸಾಹೇಬ ಪಾಟೀಲ, ಅನಿಲ ಬಾಗನೆ, ಪಂಕಜ ಪಾಟೀಲ, ಪಪಂ ಅಧ್ಯಕ್ಷ ದಿಗಂಬರ ಕಾಂಬಳೆ, ದತ್ತ ಕಾರ್ಖಾನೆ ಉಪಾಧ್ಯಕ್ಷ ಶರದಚಂದ್ರ ಪಾಠಕ, ಇಂದ್ರಜಿತ್ ಪಾಟೀಲ, ಅರುಣ ದೇಸಾಯಿ, ಬಾಳಾಸಾಹೇಬ ಪಾಟೀಲ, ಶೀತಲ ಅಮ್ಮನವರ, ಸಂಜಯ ಶಿಂತ್ರೆ, ಸುದರ್ಶನ ಖೋತ, ರಾಜು ಖಿಚಡೆ, ನಿರಂಜನ ಪಾಟೀಲ, ಬಾವುಸಾಹೇಬ ನಾಯ್ಕ, ಮೋಹನ ನವಲೆ, ಅಶೋಕ ಬಂಕಾಪುರೆ, ಆರ್.ಟಿ.ಚೌಗಲಾ ಇತರರಿದ್ದರು. ಸಚಿನ ಹಂಚನಾಳೆ ನಿರೂಪಿಸಿದರು. ರಾವಸಾಹೇಬ ಚೌಗಲಾ ವಂದಿಸಿದರು.
"

ಹಲವು ದಶಕಗಳಿಂದ ಅರಿಹಂತ ಬ್ಯಾಂಕ್, ಸಕ್ಕರೆ ಕಾರ್ಖಾನೆ ಮತ್ತು ಕೃಷಿ ಸಂಘದ ಮೂಲಕ ರೈತರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಕಾಲಕಾಲಕ್ಕೆ ರೈತರಿಗೆ ಮಾರ್ಗದರ್ಶನ ನೀಡಿ ಅವರ ಆರ್ಥಿಕ ಉನ್ನತಿಗೆ ಶ್ರಮಿಸುತ್ತಿದ್ದೇವೆ. ದಿ.ರಾವಸಾಹೇಬ ಪಾಟೀಲ ಅವರ ದಾರಿಯಲ್ಲಿ ಸಹೋದರ ಅಭಿನಂದನ ಪಾಟೀಲ ಜತೆಗೂಡಿ ಸಾಗುತ್ತಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net