ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲಿ

ಬೈಲಹೊಂಗಲ ನಗರದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ತಹಸೀಲ್ದಾರ್ ಸದಾಶಿವ ಮಕ್ಕೊಜಿ ಉದ್ಘಾಟಿಸಿದರು. ಪ್ರಮೋದ ಯಲಿಗಾರ, ಆನಂದ ಲಮಾಣಿ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ತಹಸೀಲ್ದಾರ್ ಸದಾಶಿವ ಮಕ್ಕೊಜಿ ಉದ್ಘಾಟಿಸಿದರು. ಪ್ರಮೋದ ಯಲಿಗಾರ, ಆನಂದ ಲಮಾಣಿ ಇತರರಿದ್ದರು.
Published on
ಬೈಲಹೊಂಗಲ: ಗ್ರಾಮೀಣ ಮಹಿಳೆಯರು ಹಣಕಾಸು ಸಂಸ್ಥೆಗಳಿಂದ ಸಾಲದ ನೆರವು ಪಡೆಯುವ ಮೂಲಕ ಕೃಷಿ, ಗೃಹ ಕೈಗಾರಿಕೆ, ಕರಕುಶಲ, ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ತಹಸೀಲ್ದಾರ್ ಸದಾಶಿವ ಮಕ್ಕೊಜಿ ಹೇಳಿದರು.
ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಾಲದ ಹಣ ಬೇರೆ ಉದ್ದೇಶಗಳಿಗೆ ಬಳಸದೇ ಆದಾಯ ತರುವ ಉದ್ಯಮಗಳಲ್ಲಿ ಹೂಡಿಕೆ ಮಾಡಬೇಕು. ನಿಗದಿತ ಅವಧಿಯಲ್ಲಿ ಕಂತು ಪಾವತಿಸಬೇಕು ಎಂದರು.
ಡಾ.ಅನಿಲ ಅಗ್ನಿಹೊತ್ರಿ, ಸಿಪಿಐ ಪ್ರಮೋದ ಯಲಿಗಾರ, ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಸಂಸ್ಥೆ ವಿಭಾಗೀಯ ವ್ಯವಸ್ಥಾಪಕ ಆನಂದ ಲಮಾಣಿ ಮಾತನಾಡಿದರು.
ಝೋನಲ್ ಟೀಮ್ ಲೀಡರ್ ಈರಣ್ಣ ಎಂ.ಎಚ್., ವಲಯ ವ್ಯವಸ್ಥಾಪಕ ಯಲ್ಲಪ್ಪ ಬೀರನಗಡ್ಡಿ, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net