ಶುದ್ಧ ಮನಸ್ಸಿನಿಂದ ಧ್ಯಾನಿಸಲಿ

ಕಕಮರಿ ಗುರುದೇವಾಶ್ರಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನದಲ್ಲಿ ಆತ್ಮಾರಾಮ ಸ್ವಾಮೀಜಿ ಮಾತನಾಡಿದರು. ಅದ್ವೈತಾನಂದ ಸ್ವಾಮೀಜಿ, ಗಂಗಣ್ಣ ಮಹಾರಾಜರು ಇತರರಿದ್ದರು.
ಕಕಮರಿ ಗುರುದೇವಾಶ್ರಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನದಲ್ಲಿ ಆತ್ಮಾರಾಮ ಸ್ವಾಮೀಜಿ ಮಾತನಾಡಿದರು. ಅದ್ವೈತಾನಂದ ಸ್ವಾಮೀಜಿ, ಗಂಗಣ್ಣ ಮಹಾರಾಜರು ಇತರರಿದ್ದರು.
Published on
ಕಕಮರಿ: ಸರಳ ಹಾಗೂ ಶುದ್ಧ ಮನಸ್ಸಿನಿಂದ ಶಿವನನ್ನು ಧ್ಯಾನಿಸಿ ಪೂಜೆ ಮಾಡುವ ಹಬ್ಬವೇ ಶಿವರಾತ್ರಿ ಎಂದು ಗುರುದೇವಾಶ್ರಮ ಆತ್ಮಾರಾಮ ಸ್ವಾಮೀಜಿ ಹೇಳಿದರು.
ಗ್ರಾಮದ ಗುರುದೇವಾಶ್ರಮದಲ್ಲಿ ಶಿವರಾತ್ರಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಜಪಯಜ್ಞ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವರಾತ್ರಿ ಆಚರಣೆಗೆ ಸೀಮಿತಗೊಳಿಸದೆ ನಿತ್ಯ ಶಿವಸ್ಮರಣೆ ಮಾಡಬೇಕು ಎಂದರು.
ವಿಜಯಪುರದ ಅದ್ವೈತಾನಂದ ಸ್ವಾಮೀಜಿ ಮಾತನಾಡಿ, ಪ್ರವಚನ ಕೇಳುವುದರಿಂದ ಮನಸ್ಸು ಹಸನಾಗುತ್ತದೆ ಎಂದು ಹೇಳಿದರು.
ಮಾತೋಶ್ರೀ ಭೀಮವ್ವ, ಗಂಗಣ್ಣ ಮಹಾರಾಜರು, ಜಿಪಂ ಮಾಜಿ ಸದಸ್ಯ ರಮೇಶ ದೇವರ್ಷಿ, ತಾಪಂ ಮಾಜಿ ಸದಸ್ಯ ಅಪ್ಪಾಸಾಹೇಬ ಜಿಡಗೆ, ಗುರಪ್ಪ ಬಿಳ್ಳೂರ, ಮಹಾಂತೇಶ ಮಠಪತಿ, ಅಪ್ಪಾಸಾಹೇಬ ವಾಲಿ, ಗುರುದೇವ ಪುಠಾಣಿ, ಈರಪ್ಪ ದಳವಾಯಿ, ರಮೇಶ ಅಡಹಳ್ಳಿ, ಸಂಗಮೇಶ ಬಿಳ್ಳೂರ, ಹನುಮಂತ ಸಿಂಧೂರ, ಶಿವನಿಂಗ ತಳಕಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net