ವ್ಯಸನಮುಕ್ತ ಸಮಾಜ ನಿರ್ಮಿಸೋಣ

ಬೋರಗಾಂವದಲ್ಲಿ ಶಿವಪ್ರಸಾದ ದೇವರನ್ನು ಡಾ.ಶಂಕರ ಮಾಳಿ, ಅಣ್ಣಾಸಾಹೇಬ ಹಾವಲೆ, ಪೃಥ್ವಿರಾಜ ಪಾಟೀಲ ಸನ್ಮಾನಿಸಿದರು.
ಬೋರಗಾಂವದಲ್ಲಿ ಶಿವಪ್ರಸಾದ ದೇವರನ್ನು ಡಾ.ಶಂಕರ ಮಾಳಿ, ಅಣ್ಣಾಸಾಹೇಬ ಹಾವಲೆ, ಪೃಥ್ವಿರಾಜ ಪಾಟೀಲ ಸನ್ಮಾನಿಸಿದರು.
Published on

ಬೋರಗಾಂವ: ವ್ಯಸನದಿಂದ ಸಮಾಜ ಕ್ಷೀಣಿಸುತ್ತಿದೆ. ಜನರಿಗೆ ಸರಿಯಾದ ಮಾರ್ಗದರ್ಶನ ನೀಡುವ ಸಂಕಲ್ಪದಿಂದ ಪ್ರತಿ ಹಳ್ಳಿಯಲ್ಲೂ ವ್ಯಸನಮುಕ್ತ ಅಭಿಯಾನ ಪ್ರಾರಂಭಿಸಿದ್ದೇವೆ. ಈ ಅಭಿಯಾನದಡಿ ಸುಸಂಸ್ಕೃತ ಸಮಾಜ ಕಟ್ಟಲು ಪ್ರಯತ್ನಿಸುತ್ತಿದ್ದೇವೆ ಎಂದು ಚಿಂಚಣಿ ಮಠದ ಶಿವಪ್ರಸಾದ ದೇವರು ಹೇಳಿದರು.

ಪಟ್ಟಣದ ಮಹಾದೇವ ಮಂದಿರದಲ್ಲಿ ವ್ಯಸನಮುಕ್ತ ಅಭಿಯಾನ ಹಾಗೂ ಪ್ರವಚನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ, ಯುವಜನರು ಬದಲಾದರೆ ಕುಟುಂಬ, ಕುಟುಂಬ ಬದಲಾದರೆ ಸಮಾಜ ಬದಲಾಗುತ್ತದೆ. ಎಲ್ಲರೂ ವ್ಯಸನಮುಕ್ತ ಸಮಾಜ ರಚಿಸಲು ಪ್ರಯತ್ನಿಸೋಣ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಾಸಾಹೇಬ ಹಾವಲೆ, ಮುಖಂಡ ಡಾ.ಶಂಕರ ಮಾಳಿ ಮಾತನಾಡಿ, ಶಿವಪ್ರಸಾದ ಸ್ವಾಮೀಜಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು.
ಕುಮಾರೇಶ ಶಾಸ್ತ್ರೀ, ಪೃಥ್ವಿರಾಜ ಪಾಟೀಲ, ಧನಶ್ರೀ ಪಾಟೀಲ, ಅನುಜ ಹವಲೆ, ಪ್ರದೀಪ ಮಾಳಿ, ರಾಜಶೇಖರ ಹಿರೇಮಠ, ಮಹಾದೇವ ನೇಜೆ, ಶಿವಪ್ಪ ಮಾಳಗೆ, ಬಾಳಾಸಾಹೇಬ ಪಾಟೀಲ, ರಮೇಶ ಮಾಳಿ, ಅಮಿತ ಮಾಳಿ, ಪ್ರಕಾಶ ಪಾಟೀಲ, ರಮೇಶ ಮಾಲಗಾವೆ, ಅಭಯಕುಮಾರ ಕರೋಲೆ, ಭಾವುಸಾಬ ಪಾಟೀಲ, ಆರ್.ಎಸ್.ಪಚಂಡಿ, ಶಿವಾನಂದ ರಾಜಮಾನೆ, ತಾತ್ಯಾಸಾಹೇಬ ಬಸಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net