ಮಹಾತ್ಮರ ಚಿಂತನೆ ಅಳವಡಿಸಿಕೊಳ್ಳಲಿ

ರಾಯಬಾಗ ಪಟ್ಟಣದಲ್ಲಿ  ಶಾಸಕ ಡಿ.ಎಂ.ಐಹೊಳೆ ಅವರು ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಮಹಾದೇವ ಸನಮುರಿ, ವಿಠ್ಠಲ ಚಂದರಗಿ, ಲಕ್ಕಪ್ಪ ಪೂಜಾರಿ, ಅಪ್ಪಾಸಾಹೇಬ ಕೆಂಗನ್ನವರ ಇತರರಿದ್ದರು.
ರಾಯಬಾಗ ಪಟ್ಟಣದಲ್ಲಿ ಶಾಸಕ ಡಿ.ಎಂ.ಐಹೊಳೆ ಅವರು ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಮಹಾದೇವ ಸನಮುರಿ, ವಿಠ್ಠಲ ಚಂದರಗಿ, ಲಕ್ಕಪ್ಪ ಪೂಜಾರಿ, ಅಪ್ಪಾಸಾಹೇಬ ಕೆಂಗನ್ನವರ ಇತರರಿದ್ದರು.
Published on
ರಾಯಬಾಗ: ಡಾ.ಬಾಬು ಜಗಜೀವನರಾಮ್ ಅವರ ಹೋರಾಟದ ಜೀವನದ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಂಡು, ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಸಮಾಜ ಸೇವಕ ಕಾಡೇಶ ಐಹೊಳೆ ಹೇಳಿದರು.
ಪಟ್ಟಣದ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ೧೧೯ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನಾಂಗ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ಚಿಂತನೆಗಳ ಅಧ್ಯಯನ ಮಾಡಬೇಕೆಂದು ತಿಳಿಸಿದರು.
ಸಿಪಿಐ ಎಂ.ಎಂ.ಡಪ್ಪಿನ, ಸಮಾಜ ಕಲ್ಯಾಣ ಇಲಾಖೆ ಗ್ರೇಡ್-೧ ಸಹಾಯಕ ನಿರ್ದೇಶಕ ವಿ.ಎಸ್.ಚಂದರಗಿ ಮಾತನಾಡಿದರು.
ತಹಸೀಲ್ದಾರ್ ಮಹಾದೇವ ಸನಮುರಿ ಅಧ್ಯಕ್ಷತೆ ವಹಿಸಿದ್ದರು. ಬೆಳಗ್ಗೆ ಪಟ್ಟಣದ ಮಾತಂಗಿ ದೇವಸ್ಥಾನ ಹತ್ತಿರ ಶಾಸಕ ಡಿ.ಎಂ.ಐಹೊಳೆ ಅವರು ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಪಪಂ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಡಾ.ಎಸ್.ಎಂ.ಪಾಟೀಲ, ಪರಮಾನಂದ ಮಂಗಸೂಳಿ, ಎಸ್.ವೈ.ಸನಮನಿ, ಎಂ.ಆರ್.ಪಾಟೀಲ, ಡಾ.ಎಂ.ಬಿ.ಪಾಟೀಲ, ಎಚ್.ಎಲ್.ಪೂಜಾರಿ, ಬಸವರಾಜ ಕಾಂಬಳೆ, ಎಂ.ಪಿ.ಜೀರಗ್ಯಾಳ, ಕಲ್ಪನಾ ಕಾಂಬಳೆ, ಭಾರತಿ ಕಾಂಬಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಬಸವರಾಜ ಸನದಿ, ಲಕ್ಕಪ್ಪ ಪೂಜಾರಿ, ಅಪ್ಪಾಸಾಹೇಬ ಕೆಂಗೆನ್ನವರ, ಸುರೇಶ ಐಹೊಳೆ, ಮಹೇಶ ಐಹೊಳೆ, ಸಂಜೀವ ಮೈಶಾಳೆ, ದಿಲೀಪ ಪಾಯನ್ನವರ ಇತರರು ಇದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಮಾಹಾವೀರ ಜೀರಗ್ಯಾಳ ನಿರೂಪಿಸಿದರು. ಅಂಬರೀಶ ಕಾಂಬಳೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net