

ಅಂಕಲಗಿ: ಶಿಕ್ಷಣ ಕ್ಷೇತ್ರ ಮಾನವ ಸಂಪನ್ಮೂಲದ ಬಹು ದೊಡ್ಡ ಆಸ್ತಿ. ಶಿಕ್ಷಕರು ಸುಂದರ ಬದುಕಿನ ಶಕ್ತಿ ಎಂದು ಬೆಳಗಾವಿ ಪಾಲಿಕೆ ಮಾಜಿ ಮೇಯರ್ ಎನ್.ಬಿ. ನಿರ್ವಾಣಿ ಹೇಳಿದರು.
ಅಂಕಲಗಿಯಲ್ಲಿ ಸಮಸ್ತ ಶಿಕ್ಷಕ ಬಳಗ ಹಾಗೂ ಆಪ್ತರಿಂದ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾಂತ್ರಿಕ ಕಾಲಮಾನದ ಶಿಕ್ಷಣ ವ್ಯವಸ್ಥೆಯಲ್ಲಿ ಗುರು, ಹಿರಿಯರನ್ನು ಗೌರವಿಸುವ ವಿಚಾರವಾಗಿ ಅರಿವಿನ ಕೊರತೆ ಇದ್ದು, ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಸಿದ್ದಪ್ಪ ಹೊಳೆಯಾಚಿ, ಬಸನಗೌಡ ಈಶ್ವರಪ್ಪಗೋಳ ಮಾತನಾಡಿದರು. ಬೂದಿಹಾಳ ಸರ್ಕಾರಿ ಶಾಲೆಯ ನಿವೃತ್ತ ಪ್ರಧಾನ ಶಿಕ್ಷಕಿ ಮಲಪ್ರಭಾ ಬೆಣ್ಣಿ ಮತ್ತು ವೀರನಗೌಡಾ ಈಶ್ವರಪ್ಪಗೋಳ ದಂಪತಿಯನ್ನು ಸನ್ಮಾನಿಸಲಾಯಿತು. ಮದವಾಲ, ಸುಳಧಾಳ, ಅಂಕಲಗಿ ಸಿಆರ್‌ಪಿ ಬಾಗೇವಾಡಿ, ಹುಡೇದ, ಯರಗಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸತೀಶ ಶುಗರ್ಸ್ ಉಪಾಧ್ಯಕ್ಷ ಎಲ್.ಆರ್.ಕಾರಗಿ, ಅಶೋಕ ಬೆಣ್ಣಿ, ಮಂಜುನಾಥ ನಲ್ಪರೋಶಿ, ಜಿ.ಆರ್.ಸನದಿ, ಎಸ್.ಬಿ.ಉರಬಿನಹಟ್ಟಿ, ಶಂಕರ ಬೆಣ್ಣಿ, ಗಣೇಶ ಮರಲಿಂಗನ್ನವರ ಇತರರಿದ್ದರು. ಪ್ರಣತಿ ಈಶ್ವರಪ್ಪಗೋಳ ನಿರೂಪಿಸಿದರು. ಪ್ರಕಾಶ ಮರಲಿಂಗನ್ನವರ ಸ್ವಾಗತಿಸಿದರು. ಶಿವಾನಂದ ಹಣಮನ್ನವರ ವಂದಿಸಿದರು.