ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಲಿ

ಅಂಕಲಿ ಗ್ರಾಮದಲ್ಲಿರುವ ಗೋಮಟೇಶ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಲಲಿತಾ ಮಗದುಮ್ಮ ಉದ್ಘಾಟಿಸಿದರು. ಪ್ರಸನ್ನ ಸವಣೂರು, ಎನ್.ಎಸ್. ನಿಡಗುಂದೆ ಇತರರಿದ್ದರು.
ಅಂಕಲಿ ಗ್ರಾಮದಲ್ಲಿರುವ ಗೋಮಟೇಶ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಲಲಿತಾ ಮಗದುಮ್ಮ ಉದ್ಘಾಟಿಸಿದರು. ಪ್ರಸನ್ನ ಸವಣೂರು, ಎನ್.ಎಸ್. ನಿಡಗುಂದೆ ಇತರರಿದ್ದರು.
Published on
ಮಾಂಜರಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಸೋಲು-ಗೆಲುವು ಮುಖ್ಯವಲ್ಲ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಆದ್ದರಿಂದ ಎಲ್ಲರೂ ಆಸಕ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಸಂಸ್ಥೆಯ ಖಜಾಂಚಿ ಲಲಿತಾ ಮಗದುಮ್ಮ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಶ್ರೀ ಗೋಮಟೇಶ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ
ಡಾ.ಎನ್.ಎ.ಮಗದುಮ್ಮ ಸಿಬಿಎಸ್‌ಇ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ಪ್ರಸನ್ನ ಸವಣೂರು, ಎನ್.ಎಸ್.ನಿಡಗುಂದೆ ಹಾಗೂ ಎಸ್.ಎಸ್.ಕುಲಕರ್ಣಿ, ರಾಜು ಕುಂಬಾರ, ಶೇಖರ ಕಾಂಬಳೆ ಇತರರಿದ್ದರು. ಸಂತೋಷ ಚೌಹಾಣ ಪ್ರತಿಜ್ಞಾವಿಧಿ ಬೋಧಿಸಿದರು. ಟೀನಾ ಜೋಶಿ ನಿರೂಪಿಸಿದರು. ನವ್ಯಾ ಲಂಗೋಟೆ ಸ್ವಾಗತಿಸಿದರು. ವಿನಾಯಕ ನಾಯಕ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net