ಯುವಕರು ಅಧ್ಯಯನಕ್ಕೆ ಆದ್ಯತೆ ನೀಡಲಿ

ಉಗರಗೋಳದಲ್ಲಿ ಲಕ್ಷದೀಪೋತ್ಸವಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ವಿರೂಪಾಕ್ಷ ಮಾಮನಿ, ಎಂ.ಆರ್.ಹಿರೇಮಠ, ಮಹಾಂತ ಶ್ರೀಗಳು ಇತರರಿದ್ದರು.
ಉಗರಗೋಳದಲ್ಲಿ ಲಕ್ಷದೀಪೋತ್ಸವಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ವಿರೂಪಾಕ್ಷ ಮಾಮನಿ, ಎಂ.ಆರ್.ಹಿರೇಮಠ, ಮಹಾಂತ ಶ್ರೀಗಳು ಇತರರಿದ್ದರು.
Published on
ಉಗರಗೋಳ: ಜಂಗಮ ಸಮುದಾಯದ ಮಕ್ಕಳಿಗಾಗಿ ಸಂಸ್ಕೃತ ಪಾಠಶಾಲೆ ತೆರೆದು ಉಚಿತವಾಗಿ ಶಿಕ್ಷಣ ನೀಡುತ್ತಿರುವ ವಿಶೇಷ ನಿವತ್ತ ಜಿಲ್ಲಾಧಿಕಾರಿ ಎಂ.ಆರ್.ಹಿರೇಮಠ ಕಾರ್ಯ ಶ್ಲಾಘನೀಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಲಕ್ಷದೀಪೋತ್ಸವ ಉದ್ಘಾಟಿಸಿ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಠ ಹಾಗೂ ಸಂಸ್ಕೃತ ಪಾಠಶಾಲೆಗೆ ಸಹಕಾರ ನೀಡುತ್ತೇನೆ ಎಂದರು.ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ, ನಿವತ್ತ ಜೀವನವನ್ನು ಜಂಗಮ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಿರೇಮಠ ಅವರ ಸೇವೆ ಪ್ರಶಂಸನೀಯ ಎಂದರು.
ಉಪನ್ಯಾಸಕ ಉಮೇಶ ನರಗುಂದ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ವಿಶೇಷ ನಿವತ್ತ ಜಿಲ್ಲಾಧಿಕಾರಿ ಎಂ.ಆರ್.ಹಿರೇಮಠ, ನಿರ್ವಾಣೇಶ್ವರ ಮಠದ ಮಹಾಂತ ಶ್ರೀಗಳು, ರಾಮಾರೂಢ ಮಠದ ಬ್ರಹ್ಮಾರೂಢ ಶ್ರೀಗಳು, ಜಗದೀಶ ಕೌಜಗೇರಿ, ಸಿದ್ದನಗೌಡ ಗೂಡರಾಶಿ, ಅಲ್ಲಮಪ್ರಭು ಪ್ರಭುನವರ, ಪುಂಡಲೀಕ ಬಾಳೋಜಿ, ಮಂಜುನಾಥಯ್ಯ ಕಂಬಿ, ಗುರುಸಿದ್ದಯ್ಯ ಹಿರೇಮಠ, ಉಮೇಶ ನರಗುಂದ, ಶರಣಗೌಡ ಪಾಟೀಲ, ಏಕನಗೌಡ ತಿಪರಾಶಿ, ಚಂದ್ರಣ್ಣ ಶ್ಯಾಮರಾಯನವರ, ದೇವರಡ್ಡಿ ಬಿಜಗುಪ್ಪಿ, ಮಂಜುನಾಥ ಯಕ್ಕುಂಡಿ, ಧರ್ಮಪ್ಪ ಚಂದರಗಿ, ಜಗದೀಶ ಬೂದಣ್ಣವರ, ಆನಂದ ಭೋವಿ, ಮುತ್ತಯ್ಯ ತೋರಗಲ್ಲಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net