ಬಸ್ತವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ಪ್ರಕಾಶ ಇಂಗಳಗಿ ಅವರಿಗೆ ರಮೇಶ ಕತ್ತಿ ಅವರು ಬೆಳ್ಳಿ ಗದೆ ನೀಡಿ ಗೌರವಿಸಿದರು. ಪ್ರಜ್ವಲ ಲಕ್ಕುಂಡಿ, ಕಾಡಪ್ಪ ಮಗದುಮ್ಮ, ದಯಾನಂದ ವಂಟಮೂರಿ ಇತರರಿದ್ದರು.
Published on:
Copied
Follow Us
ಹುಕ್ಕೇರಿ: ಯುವ ಸಮೂಹ ಆರೋಗ್ಯದ ಜತೆಗೆ ಸದೃಢವಂತರಾಗಿ ಬದುಕಬೇಕೆಂದು ಗ್ರಾಮಗಳಲ್ಲಿ ಮೊದಲು ಗರಡಿ ಮನೆ ಸ್ಥಾಪಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವು ಇಲ್ಲವಾಗುತ್ತಿರುವುದು ಶೋಚನೀಯ ಸಂಗತಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ಪ್ರಕಾಶ ಇಂಗಳಗಿ, ಪ್ರಜ್ವಲ ಲಕ್ಕುಂಡಿಗೆ ಬೆಳ್ಳಿ ಗದೆ ಮತ್ತು ೨೦ ಸಾವಿರ ರೂ. ನಗದು ಬಹುಮಾನ ವಿತರಿಸಿ ಮಾತನಾಡಿದರು.
ದಶಕಗಳ ಹಿಂದೆ ಪ್ರತಿಯೊಂದು ಗ್ರಾಮದಲ್ಲಿ ೨೦ರಿಂದ ೩೦ ಕುಸ್ತಿ ಪಟುಗಳಿರುತ್ತಿದ್ದರು. ಅವರು ಜಾತ್ರಾ ಮಹೋತ್ಸವದಲ್ಲಿ ಆಯೋಜಿಸುತ್ತಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಶಕ್ತ್ತಿ ಪ್ರದರ್ಶನ ಮಾಡುತ್ತಿದ್ದರು. ಆದರೆ, ಇಂದು ನೆನಪಾಗಿ ಉಳಿಯುತ್ತಿರುವುದು ವಿಷಾದನೀಯ. ಇಂತಹ ಪರಿಸ್ಥಿತಿಯಲ್ಲಿ ಬಸ್ತವಾಡ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದು ಶ್ಲಾಘನೀಯ. ಯುವಕರು ಇಂತಹ ದೇಸಿ ಕ್ರೀಡೆಗಳಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಿ ಬದುಕಬೇಕು ಎಂದರು.
ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಸುರೇಶ ವಂಟಮೂರಿ, ಪಿಕೆಪಿಎಸ್ ಅಧ್ಯಕ್ಷ ಅಶೋಕ ಪಾಟೀಲ, ಉದ್ಯಮಿ ಆನಂದ ಲಕ್ಕುಂಡಿ, ಮುಖಂಡರಾದ ಪರಗೌಡ ಪಾಟೀಲ, ದಯಾನಂದ ವಂಟಮೂರಿ, ನೇಮಣ್ಣ ಮಗದುಮ್ಮ, ಕಾಡಪ್ಪ ಮಗದುಮ್ಮ, ಶಂಕರಗೌಡ ಪಾಟೀಲ, ಪ್ರಜ್ವಲ ಲಕ್ಕುಂಡಿ ಇತರರಿದ್ದರು.